Publish Date: Sun, 17 Mar 2019 (08:29 IST)
Updated Date: Sun, 17 Mar 2019 (08:32 IST)
ಬೆಂಗಳೂರು: ಕೆಲವೊಂದು ನಿರ್ದಿಷ್ಟ ಕೆಲಸಗಳಿಗೆ ಇಂತಹ ದಿನಗಳಂದು ಮಾಡಿದರೇ ಯಶಸ್ಸು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈಗ ಯಾವ ದಿನ ಕೊಳವೆ ಬಾವಿ ತೋಡಿದರೆ ಸಮೃದ್ಧವಾಗಿ ನೀರು ಸಿಗುತ್ತದೆ ನೋಡೋಣ.
ವಾರದ ಲೆಕ್ಕದಲ್ಲಿ ನೋಡುವುದಾದರೆ ಸೋಮವಾರ, ಗುರುವಾರ, ಶುಕ್ರವಾರಗಳಂದು ಕೊಳವೆ ಬಾವಿ ತೋಡಿದರೆ ಉತ್ತಮ ನೀರು ಸಿಗುವುದು. ತಿಥಿ ಪ್ರಕಾರ ನೋಡುವುದಾದರೆ ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ ಮತ್ತು ತ್ರಯೋದಶಿ (ಕೃಷ್ಣ ಪಕ್ಷದಲ್ಲಿ ಪಂಚಮಿ ದಾಟಬಾರದು) ಒಳ್ಳೆಯ ದಿನ.
ಇನ್ನು, ನಕ್ಷತ್ರದ ಪ್ರಕಾರ ನೋಡುವುದಾದರೆ, ರೋಹಿಣಿ, ಪುಷ್ಯ, ಮಖಾ, ಹಸ್ತ, ಅನುರಾಧ, ಶ್ರವಣ, ಉತ್ತರಾಭದ್ರ, ರೇವತಿ ನಕ್ಷತ್ರಗಳಿರುವ ದಿನ ಒಳ್ಳೆಯ ದಿನಗಳು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ