Select Your Language

Notifications

webdunia
webdunia
webdunia
webdunia

ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವ ಗ್ರಹದ ಪೂಜೆ ಮಾಡಿದರೆ ಯಶಸ್ಸು ಕಾಣಬಹುದು ಎಂದು ತಿಳಿಯಬೇಕಾ

ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವ ಗ್ರಹದ ಪೂಜೆ ಮಾಡಿದರೆ ಯಶಸ್ಸು ಕಾಣಬಹುದು ಎಂದು ತಿಳಿಯಬೇಕಾ
ಬೆಂಗಳೂರು , ಗುರುವಾರ, 22 ಫೆಬ್ರವರಿ 2018 (06:48 IST)
ಬೆಂಗಳೂರು : ಎಲ್ಲಾ ಉದ್ಯೋಗಕ್ಕು ಅದರದೆ ಆದ  ಗ್ರಹಗಳ ಸಂಬಂದವಿರುತ್ತದೆ. ಆ ಗ್ರಹದ ಪೂಜೆ ಮತ್ತು ಆರಾಧನೆ ಮಾಡಿದರೆ ನೀವು ಮಾಡುವ ಉದ್ಯೋಗದಲ್ಲಿ ಪ್ರಗತಿ ಕಾಣುತ್ತದೆ ಮತ್ತು ಅದೇ ಉದ್ಯೋಗ, ವ್ಯವಹಾರದಲ್ಲಿ ನೀವು ಅಂದುಕೊಂಡ ಗುರಿ  ಸಾಧಿಸಬಹುದು.


ಸೂರ್ಯ : ಅಧಿಕಾರಿಗಳು ,ಸರಕಾರಿ ಕೆಲಸಗಾರರು, ರಾಜಕೀಯ ಸಂಬಂದಪಟ್ಟ, ರಾಜ್ಯಶಾಸ್ತ್ರದಲ್ಲಿ, ಅಂತರಾಷ್ಟ್ರೀಯ ವ್ಯವಹಾರಗಳು, ಆಡಳಿತಾತ್ಮಕ ಉದ್ಯೋಗಗಳು.


ಚಂದ್ರ : ನೀರಿನ ಸಂಬಂದಪಟ್ಟ ಉದ್ಯೋಗ, ನಿರಾವರಿ ಸಂಸ್ಥೆಗಳು, ಅಂಗಡಿಕಾರ, ಪೋಸ್ಟಮ್ಯಾನ್, ರೈಲ್ವೆ, ಮೀನುಗಾರಿಕೆ, ಹಡಗು ನಿರ್ವಾಹಕರು, ಸಮುದ್ರ ಉತ್ಪನ್ನಗಳು, ಸಂಚಾರಿ ಸಂಸ್ಥೆಗಳು, ಪಶು, ಅರಣ್ಯ  ಉದ್ಯೋಗಗಳು ಸಂಬಂದಿಸಿದ್ದು.
ಕುಜ : ಜಮೀನುದಾರರು, ವೈದ್ಯರು, ಸೇನಾಧೀಶರು, ಪೋಲಿಸರು, ಕಂಟ್ರಾಕ್ಟರ್, ದಲ್ಲಾಳಿಗಳು, ಸಂಘಟನೆಗಳನ್ನು ಮಾಡುವವರು, ಮಿಲಿಟರಿಯಲ್ಲಿನ ಅಧಿಕಾರಿಗಳು, ಆಯುಧ ಉತ್ಪಾದಕರು.
ಬುಧ : ಬರಹಗಾರರು, ಲೆಕ್ಕದಾರರು, ಪುಸ್ತಕ ವ್ಯಪಾರರು, ವರ್ತಕರು, ಸಣ್ಣ ಉದ್ಯೋಗ, ಬ್ಯಾಂಕಿನಲ್ಲಿ, ರೇಡಿಯೋ ಟಿ.ವಿ ಮನರಂಜಕರು, ಶಿಲ್ಪಕಲೆ, ಬೆರಳಚ್ಚು, ಜೆರಾಕ್ಸ್, ಮೊಬೈಲ್ ವ್ಯಪಾರರು.
ಗುರು : ರಾಜಕಾರಣಿ, ಮಂತ್ರಿ, ವಕೀಲರು, ಸಲಹೆಗಾರರು, ಬಂಗಾರ ಬೆಳ್ಳಿಯ ವ್ಯಪಾರರು, ಶಿಕ್ಷಕರು, ಪೌರೋಹಿತ, ಜ್ಯೋತಿಷಿಗಳು, ಉಪನ್ಯಾಸಕರು, ಧಾರ್ಮಿಕ ಅಧಿಕಾರಿಗಳು, ಗುರುಗಳು, ವಿಮಾನ ಸಂಸ್ಥೆಗಳಲ್ಲಿ ಉದ್ಯೋಗ.
ಶುಕ್ರ : ಜವಳಿ ಮತ್ತು ಸುಗಂಧ ಸಾಮಾನುಗಳ ವ್ಯಪಾರರು, ನಾಟಕ ರಂಗದಲ್ಲಿ, ಸಿನಿಮ ರಂಗದಲ್ಲಿ ಇರುವವರು, ಧನರಕ್ಷಕರು, ಹಣದನಿರ್ವಾಹಕರು, ಚಿನ್ನ ಬೆಳ್ಳಿ ವ್ಯಪಾರರು, ವಸ್ತ್ರವಿನ್ಯಾಸರು, ಹೋಟೆಲ್ ವ್ಯಪಾರರು, ಬೇಕರಿ, ಟೈಲರಿಂಗ್, ಬ್ಯೂಟೀಷಿಯನ್.
ಶನಿ : ಮುದ್ರಣಾಲಯ, ಪೋಲಿಸ್, ಕೂಲಿಕಾರರು, ಅಧಿಕಾರಿಯ ಕೆಳಗೆ ಕೆಲಸಗಾರರು, ಕಬ್ಬಿಣದ ಕೆಲಸಗಾರರು, ಕಾರ್ಖಾನೆಯಲ್ಲಿ ಕೆಲಸ, ಕಲಿದ್ದಲು, ಸೀಮೆಂಟ್, ಬಟ್ಟೆ ವ್ಯಪಾರರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳವಾರ ಈ ಕೆಲಸಗಳನ್ನು ಮಾಡಿದರೆ ನಿಮಗೆ ದರಿದ್ರ ಆವರಿಸುವುದು ಗ್ಯಾರಂಟಿ