ನಿಮ್ಮ ಕಾಲಿನ ಎರಡನೇ ಬೆರಳು ಹೀಗಿದೆಯಾ...?

ಭಾನುವಾರ, 19 ಜನವರಿ 2020 (06:37 IST)
ಬೆಂಗಳೂರು : ಹೆಚ್ಚಿನವರು ಮದುವೆಯಾಗುವ ಹುಡುಗಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆಕೆ ಸುಂದರವಾಗಿರುವ ಜೊತೆಗೆ ಸಂಸ್ಕಾರವುಳ್ಳವಳಾಗಿರಬೇಕೆಂದು ಬಯಸುತ್ತಾರೆ. ಹಾಗೇ ಕೆಲವು ಹುಡುಗಿಯರಿಗೆ ಕಾಲಿನ 2ನೇ ಬೆರಳು ಎಲ್ಲಾ ಬೆರಳುಗಳಿಗಿಂತ ಉದ್ದವಾಗಿರುತ್ತದೆ. ಅವರ ಗುಣಲಕ್ಷಣ ಏನೆಂದು ತಿಳಿಯೋಣ.ಕಾಲಿನ ಹೆಬ್ಬರಳಿನ ಪಕ್ಕದ ಬೆರಳು ಉದ್ದವಾಗಿದ್ದ ಮಹಿಳೆ ತುಂಬಾ ಬುದ್ದಿವಂತಳಾಗಿರುತ್ತಾಳಂತೆ. ಅಲ್ಲದೇ ಆಕೆಗೆ ನಾಯಕತ್ವದ ಗುಣವಿರುತ್ತದೆಯಂತೆ. ಇವರು ಶಕ್ತಿವಂತರಾಗಿಯೂ ಬಹಳ ದೃಢತೆಯಿಂದ ಇರುತ್ತಾರೆ. ಎಲ್ಲರಿಗಿಂತ ಈ ಹುಡುಗಿಯರಲ್ಲಿ ಊಹಿಸಲಾಗದ ಶಕ್ತಿ ಇರುತ್ತದೆ. ಅಲ್ಲದೇ ಇವರು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ತನ್ನ ಪತಿಯನ್ನು ದೇವರಿಗಿಂತ ಹೆಚ್ಚಾಗಿ ಪೂಜಿಸುತ್ತಾರೆ ಮತ್ತು ಅಷ್ಟೇ ಬೆಲೆ ಕೊಟ್ಟು ಮಾತನಾಡಿಸುತ್ತಾರೆ.  

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ