Select Your Language

Notifications

webdunia
webdunia
webdunia
webdunia

½ ಲೀಟರ್ ನಂದಿನಿ ಹಾಲು ರೂ.10ಕ್ಕೆ ಮಾರಾಟ; ಸತ್ಯಾಸತ್ಯತೆ ಕಂಡುಹಿಡಿಯಲು ಕೆಎಂಎಫ್ ಹಿಂದೇಟು

½ ಲೀಟರ್ ನಂದಿನಿ ಹಾಲು ರೂ.10ಕ್ಕೆ ಮಾರಾಟ; ಸತ್ಯಾಸತ್ಯತೆ ಕಂಡುಹಿಡಿಯಲು ಕೆಎಂಎಫ್ ಹಿಂದೇಟು
ಬೆಂಗಳೂರು , ಶನಿವಾರ, 18 ಜನವರಿ 2020 (11:30 IST)
ಬೆಂಗಳೂರು : ಅರ್ಧ ಲೀಟರ್ ನಂದಿನಿ ಹಾಲು ರೂ.10ಕ್ಕೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಹರಡುತ್ತಿದ್ದಂತೆ ಅಂಗಡಿ ಬಾಗಿಲು ಮುಚ್ಚಿ ಮಾಲೀಕ ಪರಾರಿಯಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.



ನಂದಿನಿ ಹಾಲಿನ ½ ಲೀಟರ್ ಪ್ಯಾಕ್ ಗೆ 20ರೂ. ಅದಕ್ಕಿಂತ ಹೆಚ್ಚು ಬೆಲೆ ಇರುವಾಗ ಬೆಂಗಳೂರಿನ ಲಕ್ಕಸಂದ್ರದ ಗಣೇಶಗುಡಿ ರಸ್ತೆಯಲ್ಲಿ  ಕೇವಲ ರೂ.10ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಹಾಲು ಮಾರಾಟ ಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ.


ಈ ಹಾಲು ಅಸಲಿ, ನಕಲಿ ಎಂಬುದು ಇನ್ನೂ ಪತ್ತೆಯಾಗಿಲ್ಲ. ಅಲ್ಲದೇ ಹಾಲಿನ ಸತ್ಯಾಸತ್ಯತೆ ಕಂಡುಹಿಡಿಯಲು ಕೆಎಂಎಫ್ ಹಿಂದೇಟು ಹಾಕುತ್ತಿದ್ದು, ಹಾಲು ಎಲ್ಲಿಂದ ತರಲಾಗುತ್ತಿತ್ತೆಂದು,  ಕಳವು ಮಾಡಿ ತಂದು ಮಾರಾಟ ಮಾಡುತ್ತಿದ್ದಾರಾ ಎಂಬ ಬಗ್ಗೆ ಕೆಎಂಎಫ್ ಪತ್ತೆಹಚ್ಚಲು ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳ ನಿಷೇಧ ವಿಚಾರ; ಸಿಎಂ ಭೇಟಿಯಾದ ಸಂಸದ ತೇಜಸ್ವಿ ಸೂರ್ಯ