Select Your Language

Notifications

webdunia
webdunia
webdunia
webdunia

ಇಂದು ಘೋಷಣೆಯಾಗಲಿದೆಯಾ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ

ಇಂದು ಘೋಷಣೆಯಾಗಲಿದೆಯಾ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ
ಬೆಂಗಳೂರು , ಶನಿವಾರ, 18 ಜನವರಿ 2020 (10:41 IST)
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಸೂಚನೆಗಾಗಿ ಕಾಂಗ್ರೆಸ್ ನಾಯಕರು ಕಾಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.



ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಆಯ್ಕೆಯಾದರೂ ಕೂಡ ಸಿದ್ದರಾಮಯ್ಯ ಅವರು ಪಟ್ಟುಹಿಡಿದ 4 ಕಾರ್ಯಾಧ್ಯಕ್ಷ ಹುದ್ದೆಯ ವಿಚಾರದ ಬಗ್ಗೆ ಭಾರೀ ಗೊಂದಲ ಏರ್ಪಟ್ಟಿದೆ. ಆದ್ದರಿಂದ ಕಾರ್ಯಾಧ್ಯಕ್ಷ ಸ್ಥಾನದ ಕುರಿತು ಇಂದು ಹೈಕಮಾಂಡ್ ಅಂತಿಮ ನಿರ್ಧಾರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.


ಈ ಬಗ್ಗೆ ಚರ್ಚೆ ನಡೆಸಲು ಈಗಾಗಲೇ ಸಿದ್ದರಾಮಯ್ಯ ಬಣ ಹಾಗೂ ಡಿಕೆಶಿ ದೆಹಲಿಯತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಆದ್ದರಿಂದ ಕಾರ್ಯಾಧ್ಯಕ್ಷ ಸ್ಥಾನ ಹೊಂದಾಣಿಕೆಯಾಗದ ಹಿನ್ನಲೆ ಕೆಪಿಸಿಸಿ ಅಧ್ಯಕ್ಷರ ಘೋಷಣೆಯೂ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ಹಿನ್ನಲೆ; ಅಧ್ಯಕ್ಷ, ಸದಸ್ಯ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಅಸಮಾಧಾನ