Select Your Language

Notifications

webdunia
webdunia
webdunia
webdunia

ವಿಜಯದಶಮಿ ಎಷ್ಟು ಹೊತ್ತಿಗೆ ಆಚರಿಸಬೇಕು, ಮುಹೂರ್ತ ಯಾವಾಗ

Vijayadashami

Krishnaveni K

ಬೆಂಗಳೂರು , ಶನಿವಾರ, 12 ಅಕ್ಟೋಬರ್ 2024 (08:47 IST)
ಬೆಂಗಳೂರು: ದಸರಾ ವಿಜಯದಶಮಿ ಮುಹೂರ್ತದ ಬಗ್ಗೆ ಅನೇಕರಲ್ಲಿ ಗೊಂದಲಗಳಿವೆ. ವಿಜಯದಶಮಿ ಮುಹೂರ್ತ ನಿಜವಾಗಿಯೂ ಯಾವಾಗ ಎಂಬ ವಿವರ ಇಲ್ಲಿದೆ.

ದಸರಾ ಹಬ್ಬ ಕೊನೆಯ ಹಂತಕ್ಕೆ ಬಂದಿದ್ದು ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದ ದಿನವನ್ನು ವಿಜಯದಶಮಿಯಾಗಿ ಆಚರಿಸಲಾಗುತ್ತದೆ. ಇದು ಅಧರ್ಮದ ಮೇಲೆ ಧರ್ಮದ ವಿಜಯ ಎಂಬುದರ ಸಂಕೇತವಾಗಿದೆ. ಈ ವರ್ಷ ವಿಜಯದಶಮಿ ಯಾವಾಗ ಬರುತ್ತದೆ ಎಂಬ ವಿಚಾರದಲ್ಲಿ ಅನೇಕರಿಗೆ ಗೊಂದಲವಿದೆ.

ವಿಜಯದಶಮಿ ಇಂದು ಅಂದರೆ ಅಕ್ಟೋಬರ್ 12 ರಂದು ಬೆಳಿಗ್ಗೆ 10.58 ಕ್ಕೆ ಪ್ರಾರಂಭವಾಗಿ ನಾಳೆ 9.08 ರವರೆಗೆ ಇರಲಿದೆ. ಹೀಗಾಗಿ ಈ ಬಾರಿ ವಿಜಯದಶಮಿಯನ್ನು ಎರಡು ದಿನ ಆಚರಣೆ ಮಾಡಲಾಗುತ್ತಿದೆ. ಇದೇ ಕಾರಣಕ್ಕಾಗಿಯೇ ಕೆಲವರಿಗೆ ವಿಜಯದಶಮಿ ಆಚರಣೆ ಮುಹೂರ್ತದ ಬಗ್ಗೆ ಗೊಂದಲಗಳಿವೆ.

ಆದರೆ ಅಕ್ಟೋಬರ್ 12 ರಂದು ಹೆಚ್ಚು ಹೊತ್ತು ಮುಹೂರ್ತ ಸಮಯವಿರುವುದರಿಂದ ಇಂದೇ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ಕೆಲವೆಡೆ ರಾವಣ ದಹನ ಮಾಡುವ ಪದ್ಧತಿಯಿದೆ. ಇದನ್ನು ಇಂದು ಸಂಜೆ 5.53 ರಿಂದ 7.27 ಕ್ಕೆ ನಡೆಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?