Select Your Language

Notifications

webdunia
webdunia
webdunia
webdunia

ಕಾಲರಾತ್ರಿ ದೇವಿ ಪೂಜೆ ಮಾಡುವುದರ ಫಲವೇನು

Kalarathri devi

Krishnaveni K

ಬೆಂಗಳೂರು , ಬುಧವಾರ, 9 ಅಕ್ಟೋಬರ್ 2024 (08:44 IST)
Photo Credit: X
ಬೆಂಗಳೂರು: ನವರಾತ್ರಿಯ ಏಳನೇ ದಿನವಾದ ಇಂದು ದುರ್ಗಾ ದೇವಿಯನ್ನು ಕಾಲರಾತ್ರಿ ದೇವಿಯ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಕಾಲರಾತ್ರಿ ದೇವಿಯ ಪೂಜಾ ಫಲಗಳೇನು ಎಂದು ಇಂದು ನೋಡೋಣ.

ಜಗತ್ತಿನ ಅಂಧಕಾರವನ್ನು ಕಳೆದು ಸಮೃದ್ಧಿಯ ಬೆಳಕು ಚೆಲ್ಲುವವಳೇ ಕಾಲರಾತ್ರಿ. ಆಕೆಯ ರೂಪ ಭೀಭತ್ಸವಾಗಿದ್ದರೂ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಎಂದಿಗೂ ವಾತ್ಸಲ್ಯಮಯಿಯಾಗಿರುತ್ತಾಳೆ. ಕಪ್ಪು ಶರೀರದವಳಾದ ದೇವಿ ಕತ್ತೆ ಮೇಲೆ ಕೂತು ಕೈಯಲ್ಲಿ ಕತ್ತಿ ಹಿಡಿದು ಶತ್ರುಸಂಹಾರಕ್ಕೆ ತಯಾರಾಗಿ ನಿಂತಂತೆ ಗೋಚರಿಸುತ್ತಾಳೆ.

ಕಾಲರಾತ್ರಿಯು ಶನಿ ಗ್ರಹದ ಅಧಿದೇವತೆಯಾಗಿದ್ದಾಳೆ. ಜನರು ಮಾಡುವ ಪಾಪ-ಪುಣ್ಯ ಕೃತ್ಯಗಳಿಗೆ ಅನುಗುಣವಾಗಿ ಆಕೆ ಭಕ್ತರಿಗೆ ವರವನ್ನು ನೀಡುತ್ತಾಳೆ. ರಕ್ತಬೀಜಾಸುರನನ್ನು ಕೊಂದು ಆತನ ರಕ್ತದ ಒಂದು ಹನಿಯೂ ಭೂಮಿಗೆ ಬೀಳದಂತೆ ನೋಡಿಕೊಂಡ ಬಳಿಕ ಆಕ್ರೋಶದಿಂದ ನರ್ತಿಸುತ್ತಾಳೆ. ಅದೇ ಆಕ್ರೋಶದಲ್ಲಿ ಅರಿಯದೇ ಶಿವನ ಎದೆಯ ಮೇಲೆ ಕಾಲಿಡುತ್ತಾಳೆ. ಬಳಿಕ ಸಹಜಸ್ಥಿತಿಗೆ ಬರುವ ಆಕೆ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಾಳೆ.

ಶನಿ ದೋಷವಿರುವವರು ಕಾಲರಾತ್ರಿ ದೇವಿಯ ಪೂಜೆ ಮಾಡುವುದರಿಂದ ಪರಿಹಾರ ಸಿಗುವುದು. ಆಕೆಯನ್ನು ಪೂಜೆ ಮಾಡುವುದರಿಂದ ಅಗ್ನಿ, ವಾಯು, ಜಲದಿಂದ ಯಾವುದೇ ತೊಂದರೆಯಾಗುವುದಿಲ್ಲ. ಶತ್ರು ಭಯ ನಾಶವಾಗುತ್ತದೆ.

‘ಓಂ ದೇವಿ ಕಾಲರಾತ್ರೈ ನಮಃ’ ಎಂಬ ಮಂತ್ರವನ್ನು ಹೇಳುತ್ತಾ ದೇವಿಯನ್ನು ಪೂಜೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?