Select Your Language

Notifications

webdunia
webdunia
webdunia
webdunia

ನವರಾತ್ರಿ ನವಮಿ ದಿನ ಸರಸ್ವತಿ ಪೂಜೆ ಮಾಡಿದರೆ ಏನು ಫಲ

Saraswati pooja

Krishnaveni K

ಬೆಂಗಳೂರು , ಶುಕ್ರವಾರ, 11 ಅಕ್ಟೋಬರ್ 2024 (08:37 IST)
Photo Credit: X
ಬೆಂಗಳೂರು: ನವರಾತ್ರಿ ಅಂತಿಮ ಘಟ್ಟಕ್ಕೆ ಬಂದಿದ್ದು ನವಮಿ ದಿನ ಸರಸ್ವತಿ ದೇವಿಯ ಪೂಜೆ ಮಾಡುವುದರಿಂದ ಜೀವನದಲ್ಲಿ ಏಳಿಗೆ ಕಾಣಬಹುದು. ವಿಶೇಷವಾಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಿಗುತ್ತಿದೆ.

ಸರಸ್ವತಿ ದೇವಿ ಎಂದರೆ ಪುಸ್ತಕ, ವಿದ್ಯೆಯ ಅಧಿ ದೇವತೆ. ಹೀಗಾಗಿ ವಿಶೇಷವಾಗಿ ಈ ದಿನ ವಿದ್ಯಾರ್ಥಿಗಳು ದೇವಿಯ ಆರಾಧನೆ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಕೇವಲ ವಿದ್ಯಾಭ್ಯಾಸ ಮಾತ್ರವಲ್ಲದೆ, ಸಂಗೀತ, ಕಲೆ, ಜ್ಞಾನ ವೃದ್ಧಿಗಾಗಿ ಇಂದು ಸರಸ್ವತಿಯ ಆರಾಧನೆ ಮಾಡಬೇಕು.

ನವರಾತ್ರಿಯ 7 ನೇ ದಿನದಿಂದ ಸರಸ್ವತಿಯ ಆರಾಧನೆ ಆರಂಭವಾಗುತ್ತದೆ. ಏಳನೇ ದಿನ ಪುಸ್ತಕವನ್ನು ದೇವರ ಮುಂದಿಟ್ಟು ಪೂಜೆ ಮಾಡಲಾಗುತ್ತದೆ. ಸರಸ್ವತಿಯ ವಿದ್ಯಾ-ಬುದ್ಧಿ ಪ್ರದಾಯನಿಯಾಗಿದ್ದು, ಸೃಜನಶೀಲತೆ ಅಭಿವೃದ್ಧಿಯಾಗುತ್ತದೆ. ಇಂದು ವಿದ್ಯಾರ್ಥಿಗಳು ತಪ್ಪದೇ ಈ ಶ್ಲೋಕವನ್ನು ಹೇಳಿ.

‘ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣೀ
ವಿದ್ಯಾರಂಭ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ’

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?