Select Your Language

Notifications

webdunia
webdunia
webdunia
webdunia

ಬುಧವಾರದಂದು ಈ ಸ್ತೋತ್ರ ಪಠಿಸಿದರೆ ವಿಘ್ನಗಳು ದೂರ, ದಾರಿದ್ರ ನಾಶವಾಗುತ್ತದೆ

Mahavishnu

Sampriya

ಬೆಂಗಳೂರು , ಮಂಗಳವಾರ, 24 ಫೆಬ್ರವರಿ 2026 (08:52 IST)
ಬುಧವಾರದಂದು ವಿಶೇಷವಾಗಿ ಜ್ಞಾನ, ಬುದ್ಧಿ ಮತ್ತು ಚಾತುರ್ಯದ ಅಧಿದೇವತೆಯಾದ ಶ್ರೀ ಮಹಾವಿಷ್ಣು ಮತ್ತು ಬುಧ ಗ್ರಹಕ್ಕೆ ಸಮರ್ಪಿತವಾಗಿರುವ ದಿನವಾಗಿದೆ. ಈ ದಿನದಂದು ನಾವು ಕೆಲವು ಸ್ತೋತ್ರಗಳನ್ನು ಪಠಣೆ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತರಬಹುದಾಗಿದೆ. 

1. ಬುಧ ಗ್ರಹ ಸ್ತೋತ್ರ 

ಜಾತಕದಲ್ಲಿ ಬುಧ ದೋಷವಿದ್ದರೆ ಅಥವಾ ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದಲು ಈ ಮಂತ್ರವನ್ನು ಪಠಿಸಿ:


    ಪ್ರಿಯಂಗು ಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಮ್ |
    ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ||

2. ವಿಷ್ಣು ಸಹಸ್ರನಾಮ ಅಥವಾ ಮಂತ್ರ

    ಬುಧವಾರದ ಅಧಿದೇವತೆ ವಿಷ್ಣು. ಸರಳವಾಗಿ ಈ ಮಂತ್ರವನ್ನು 108 ಬಾರಿ ಜಪಿಸಬಹುದು
    ಓಂ ನಮೋ ಭಗವತೇ ವಾಸುದೇವಾಯ ನಮಃ

3. ಸಂಕಷ್ಟನಾಶನ ಗಣೇಶ ಸ್ತೋತ್ರ

ಯಾವುದೇ ಕೆಲಸದಲ್ಲಿ ವಿಘ್ನಗಳು ಬಾರದಿರಲು ಬುಧವಾರ ಗಣಪತಿಯನ್ನು ಪ್ರಾರ್ಥಿಸುವುದು ಬಹಳ ಶ್ರೇಷ್ಠ.

    ಪ್ರಣಮ್ಯ ಶಿರಸಾ ದೇವಂ ಗೌರಿಪುತ್ರಂ ವಿನಾಯಕಮ್ |
    ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಷ್ಕಾಮಾರ್ಥ ಸಿದ್ಧಯೇ ||

    ದಾನ: ಬಡವರಿಗೆ ಅಥವಾ ವಿದ್ಯಾರ್ಥಿಗಳಿಗೆ ಹಸಿರು ಬಣ್ಣದ ವಸ್ತುಗಳು ಅಥವಾ ಪುಸ್ತಕಗಳನ್ನು ದಾನ ಮಾಡುವುದು ಒಳ್ಳೆಯದು.

ಫಲ: ಈ ಸ್ತೋತ್ರಗಳನ್ನು ಪಠಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ, ವ್ಯವಹಾರದಲ್ಲಿ ಲಾಭವಾಗುತ್ತದೆ ಮತ್ತು ಮಾತಿನ ಚಾತುರ್ಯ ವೃದ್ಧಿಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳವಾರ ಆಂಜನೇಯನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ