ಯಾವಾಗಲೂ ದೀಪ ಹಚ್ಚುವಾಗ ಕೆಲವೊಂದು ತಪ್ಪುಗಳನ್ನು ಗೊತ್ತಿಲ್ಲದೆ ಮಾಡುತ್ತೇವೆ. ಅದರಲ್ಲಿ ದೀಪ ಹಚ್ಚುವಾಗ ಎರಡು ಬತ್ತಿಗಳನ್ನು ಒಟ್ಟಿಗೆ ಸೇರಿಸಿ ಹಚ್ಚುವುದು ನಮ್ಮ ಸಂಪ್ರದಾಯದಲ್ಲಿ ಬಹಳ ಮಹತ್ವವನ್ನು ಹೊಂದಿದೆ. ಇದರ ಹಿಂದೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ಅದರ ಹಿಂದಿರುವ ಕೆಲ ಕಾರಣಗಳು ಇಲ್ಲಿದೆ:
ದಾಂಪತ್ಯ ಮತ್ತು ಕುಟುಂಬದ ಸಂಕೇತ
ಶಾಸ್ತ್ರದ ಪ್ರಕಾರ, ಎರಡು ಬತ್ತಿಗಳನ್ನು ಹಾಕಿ ಹಚ್ಚುವ ದೀಪವು ಗಂಡ ಮತ್ತು ಹೆಂಡತಿಯ (ಶಿವ-ಶಕ್ತಿ) ಸಂಕೇತವಾಗಿದೆ.
ಮನೆಯಲ್ಲಿ ದಂಪತಿಗಳ ನಡುವೆ ಸಾಮರಸ್ಯವಿರಲೆಂದು ಹಾಗೂ ಕುಟುಂಬದಲ್ಲಿ ಒಗ್ಗಟ್ಟಿರಲೆಂದು ಎರಡು ಬತ್ತಿಗಳನ್ನು ಒಂದಾಗಿಸಿ ದೀಪವನ್ನು ಬೆಳಗಿಸಲಾಗುತ್ತದೆ.
ದೋಷಗಳ ನಿವಾರಣೆ
ಇನ್ನೂ ಒಂದೇ ದೀಪ ಹಚ್ಚುವುದು ಅಶುಭವೆಂದು ಹೇಳಲಾಗುತ್ತದೆ. ಎರಡು ಬತ್ತಿಗಳನ್ನು ಬಳಸಿ ದೀಪ ಹಚ್ಚುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಮತ್ತು ವಾಸ್ತು ದೋಷಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.
೩. ಬತ್ತಿ ಹಾಕುವ ಸರಿಯಾದ ಕ್ರಮ
ಎರಡು ಪ್ರತ್ಯೇಕ ಬತ್ತಿಗಳನ್ನು ತೆಗೆದುಕೊಂಡು, ಅವುಗಳ ತುದಿಗಳನ್ನು ಒಟ್ಟಿಗೆ ಸೇರಿಸಿ ಹೊಸೆದು ಒಂದು ಬತ್ತಿಯನ್ನಾಗಿ ಮಾಡಬೇಕು.
ಹೀಗೆ ಮಾಡುವುದರಿಂದ ಜ್ಯೋತಿಯು ಸ್ಥಿರವಾಗಿ ಮತ್ತು ಪ್ರಕಾಶಮಾನವಾಗಿ ಬೆಳಗುತ್ತದೆ.