ಬೆಂಗಳೂರು: ಬಹುತೇಕರಿಗೆ ಸಂಕ್ರಾಂತಿ ನಾಳೆಯಾ, ನಾಡಿದ್ದಾ ಎಂಬ ಗೊಂದಲಗಳಿವೆ. ಆದರೆ ಕನ್ ಫ್ಯೂಸ್ ಆಗಬೇಡಿ. ಮಕರ ಸಂಕ್ರಾಂತಿ ಯಾವಾಗ ಆಚರಿಸಬೇಕು ಎಂಬ ವಿವರ ಇಲ್ಲಿದೆ ನೋಡಿ.
ಕೆಲವರು ಸಂಕ್ರಾಂತಿ ಜನವರಿ 14 ಕ್ಕೆ ಎಂದರೆ ಇನ್ನು ಕೆಲವರು ಜನವರಿ 15 ಕ್ಕೆ ಎನ್ನುತ್ತಿದ್ದಾರೆ. ಹಾಗಿದ್ದರೆ ಮಕರ ಸಂಕ್ರಾಂತಿ ಪೂಜೆ ಮಾಡಲು ಸೂಕ್ತ ದಿನ ಯಾವುದು? ಮಕರ ಸಂಕ್ರಾಂತಿ ಎಂದರೆ ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವ ದಿನ. ಈ ದಿನದಿಂದ ಉತ್ತರಾಯಣ ಶುರುವಾಗುತ್ತದೆ.
ಜನವರಿ 14 ಕ್ಕೆ ಮಧ್ಯಾಹ್ನದ ನಂತರ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಹೀಗಾಗಿ ಜನವರಿ 14 ಕ್ಕೇ ಸಂಕ್ರಾಂತಿ ಆಚರಿಸಬೇಕು. ಜನವರಿ 15 ಕ್ಕೆ ತಮಿಳು ಕ್ಯಾಲೆಂಡರ್ ಪ್ರಕಾರ ಪೊಂಗಲ್ ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಈ ಎರಡೂ ದಿನ ಸಂಕ್ರಾಂತಿಯ ಸಡಗರವಿರುತ್ತದೆ. ಸಂಕ್ರಾಂತಿ ದಿನ ಅಂದರೆ ನಾಳೆ ಬೆಳಿಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ ಎಳ್ಳು ಬೆಲ್ಲ ಬೀರಿ ಪೂಜೆ ಮಾಡಿ. ಇದು ಸುಗ್ಗಿ ಹಬ್ಬವಾಗಿದ್ದು, ಸೂರ್ಯನಿಗೆ ಪೂಜೆ ಮಾಡುವುದು ಶ್ರೇಷ್ಠವಾಗಿದೆ. ವಿಶೇಷವಾಗಿ ಈ ದಿನ ಬಡವರಿಗೆ ದಾನ, ಧರ್ಮ ಮಾಡಿದಲ್ಲಿ ಪುಣ್ಯ ಪ್ರಾಪ್ತಿಯಾಗುತ್ತದೆ.