Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ ರಾಶಿ ಭವಿಷ್ಯ ಹೀಗಿದೆ
ಬೆಂಗಳೂರು , ಗುರುವಾರ, 6 ಆಗಸ್ಟ್ 2020 (07:34 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ: ಜೀವನದ ಕೆಟ್ಟ ಕಾಲದಲ್ಲಿ ಹಣ ನಿಮ್ಮ ಕೆಲಸಕ್ಕೆ ಬರುತ್ತದೆ. ಆದ್ದರಿಂದ ಇಂದಿನಿಂದಲೇ ನಿಮ್ಮ ಹಣವನ್ನು ಸಂಗ್ರಹಿಸುವ ಬಗ್ಗೆ ಯೋಚಿಸಿ.
*ವೃಷಭ ರಾಶಿ: ಇಂದು ನೀವು ಹಣದ ಪ್ರಾಮುಖ್ಯತೆ ಅರಿತುಕೊಳ್ಳುತ್ತೀರಿ. ಏಕೆಂದರೆ ಇಂದು ನಿಮಗೆ ಇದ್ದಕ್ಕಿದ್ದಂತೆ ಹಣದ ಅಗತ್ಯವಿರುತ್ತದೆ.
*ಮಿಥುನ ರಾಶಿ : ನಿಕಟ ಸಂಬಂಧಿಗಳ ನೆಗೆ ಹೋಗುವುದರಿಂದ ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಬಹುದು.
*ಕಟಕ ರಾಶಿ : ಇಂದು ನೀವು ಸಾಮಾನ್ಯವಾಗಿ ಇರುವುದಕ್ಕಿಂತ ಕಡಿಮೆ ಚೈತನ್ಯವನ್ನು ಹೊಂದುತ್ತೀರಿ. ನಿಮ್ಮ ಮೇಲೆ ನೀವೆ ಹೆಚ್ಚುವರಿ ಕೆಲಸದ ಒತ್ತಡವನ್ನು ಹೇರಬೇಡಿ.
*ಸಿಂಹ ರಾಶಿ : ಇಂದು ನೀವು ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ನಿಮ್ಮ ನಿರಂತರ ಶ‍್ರಮ ಇಂದು ನಿಮಗೆ ಫಲ ನೀಡುತ್ತದೆ.
*ಕನ್ಯಾ ರಾಶಿ : ವ್ಯಾಪಾರಿಗಳಿಗೆ ಇಂದು ವ್ಯಾಪಾರದಲ್ಲಿ ಹಾನಿ ಉಂಟಾಗಬಹುದು. ಮತ್ತು ವ್ಯಾಪರವನ್ನು ಉತ್ತಮಗೊಳಿಸಲು ಹಣವನ್ನು ಖರ್ಚು ಮಾಡಬೇಕಾಗುತ್ತದೆ.
*ತುಲಾ ರಾಶಿ : ನೀವು ಸಾಲ ತೆಗೆದುಕೊಳ್ಳಬೇಕೆಂದಿದ್ದರೆ ಇಂದು ನೀವು ಸಾಲ ಪಡೆಯಬಹುದು. ನಿಮ್ಮ ದಿಟ್ಟ ಕ್ರಮಗಳು ಮತ್ತು ನಿರ್ಧಾರಗಳು ಅನುಕೂಲಕರ ಲಾಭವನ್ನು ತರುತ್ತದೆ.  
*ವೃಶ್ಚಿಕ ರಾಶಿ : ನಿಮ್ಮ ಆಕರ್ಷಣೆ ಮತ್ತು ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ.
*ಧನು ರಾಶಿ : ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ, ಸಾಮಾಜಿಕ ಕೂಟಗಳಲ್ಲಿ ನಿಮ್ಮ ಹಾಸ್ಯದ ಪ್ರವೃತ್ತಿ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ.
*ಮಕರ ರಾಶಿ : ನೀವು ಕಳೆದುಹೋದದ್ದರ ಬಗ್ಗೆ ಯೋಚಿಸುತ್ತಿದ್ದರೆ ನಿಮ್ಮ ಹತಾಶೆ ಹೆಚ್ಚಾಗಿ ನಿಮ್ಮ ಆರೋಗ್ಯ ಹಾಳಾಗಬಹುದು.
*ಕುಂಭ ರಾಶಿ : ಇಂದು ಕೆಲಸದ ಒತ್ತಡ ಹೆಚ್ಚಿರುತ್ತದೆ. ನಿಮ್ಮ ಏಕಪಕ್ಷೀಯ ನಿರ್ಧಾರ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಆದಕಾರಣ ಕುಟುಂಬ ಸದಸ್ಯರ ಅಭಿಪ್ರಾಯ ತೆಗೆದುಕೊಳ್ಳಿ.
* ಮೀನ ರಾಶಿ : ನಿಮ್ಮ ಪ್ರೀತಿಪಾತ್ರರಿಗೆ ಒರಟಾಗಿ ಏನೂ ಹೇಳಬೇಡಿ. ಇಲ್ಲದಿದ್ದರೆ ನೀವು ನಂತರ ಪಶ್ಚಾತ್ತಾಪಪಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಶಿವನ ಮೂರನೇ ಕಣ್ಣಿನಷ್ಟೇ ಶಕ್ತಿಶಾಲಿಯಾಗಿರುತ್ತಾರಂತೆ ಈ 2 ರಾಶಿಯಲ್ಲಿ ಹುಟ್ಟಿದವರು