Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ ರಾಶಿ ಭವಿಷ್ಯ ಹೀಗಿದೆ
ಬೆಂಗಳೂರು , ಶುಕ್ರವಾರ, 24 ಜುಲೈ 2020 (07:49 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ: ನಿಮ್ಮ ದೇಹದ ಪುನಃಶ್ಚೇತನಕ್ಕಾಗಿ ಸಂಪೂರ್ಣ ವಿಶ್ರಾಂತಿ ತೆಗೆದುಕೊ‍್ಳಳದಿದ್ದರೆ ನೀವು ಆಯಾಸ ಹಾಗೂ ನಿರಾಸೆಯಲ್ಲಿ ಸಿಲುಕುತ್ತೀರಿ.

*ವೃಷಭ ರಾಶಿ: ಪ್ರವಾಸ-ಪಾರ್ಟಿಗಳು ಮತ್ತು ಆನಂದ ವಿಹಾರಗಳು ಇಂದು ನಿಮ್ಮನ್ನು ಉತ್ತಮ ಮೂಡ್ ನಲ್ಲಿಡುತ್ತದೆ, ಬಾಕಿ ಇರುವ ಕೆಲಸಗಳು ಇಂದು ಪೂರ್ಣಗೊಳ್ಳುವುದು.

*ಮಿಥುನ ರಾಶಿ : ಕೆಲವು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಿ. ಹಾಗೂ ಅವು ನಿಮಗೆ ಆರ್ಥಿಕಲಾಭ ತಂದುಕೊಡುತ್ತವೆ.

*ಕಟಕ ರಾಶಿ : ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳು ಕೂಡಿಬರುತ್ತವೆ. ಇದರಿಂದ ನೀವು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು.

*ಸಿಂಹ ರಾಶಿ : ಇಂದು ನೀವು ಚೈತನ್ಯಶೀಲರಾಗಿರುತ್ತೀರಿ. ಇಂದು ನೀವೇನೇ ಮಾಡಿದರೂ ಸಾಮಾನ್ಯವಾಗಿ ನೀವು ತೆಗೆದುಕೊಳ್ಳುವ ಅರ್ಧ ಸಮಯದಲ್ಲಿ ಅದನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ.

*ಕನ್ಯಾ ರಾಶಿ : ಆರೋಗ್ಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಇಂದು ನೀವು ಮನೆಯ ಹಿರಿಯ ಜನರಿಂದ ಹನ ಉಳಿಸುವ ಬಗ್ಗೆ ಯಾವುದೇ ಸಲಹೆಗಳನ್ನು ತೆಗೆದುಕೊಳ್ಳಬಹುದು. ಈ ಸಲಹೆ ನಿಮಗೆ ಜೀವನದಲ್ಲಿ ಉತ್ತಮ ಸ್ಥಾನವನ್ನು ನೀಡಬಹುದು.

*ತುಲಾ ರಾಶಿ : ಸ್ವಯಂ ಸುಧಾರಣೆಯ ಯೋಜನೆಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಫಲ ನೀಡುತ್ತದೆ. ನಿಮ್ಮ ಬಗ್ಗೆ ನಿಮಗೆ ಒಳ್ಳೆಯದೆನಿಸುತ್ತದೆ ಮತ್ತು ವಿಶ್ವಾಸ ಮೂಡುತ್ತದೆ.

*ವೃಶ್ಚಿಕ ರಾಶಿ : ಸಮಯಕ್ಕೆ ಅನುಗುಣವಾಗಿ ಪ್ರತಿಯೊಂದು ಕೆಲಸವನ್ನು ಪೂರೈಸುವುದು ಉತ್ತಮ. ನೀವು ಹೀಗೆ ಮಾಡಿದರೆ ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಕೆಲಸವನ್ನು ನಾಳೆಗಾಗಿ ಮುಂದೂಡಬೇಡಿ.

*ಧನು ರಾಶಿ : ತುಂಬಾ ಪ್ರಯಾಣ ನಿಮಗೆ ದಣಿವಾಗಿಸುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ ನೀವು ಅದರಲ್ಲಿ ವಿಜಯ ಸಾಧಿಸಬಹುದು.

*ಮಕರ ರಾಶಿ :ಗೃಹ ಮತ್ತು ನಕ್ಷತ್ರಗಳ ಚಲನೆಯಿಂದ ಇಂದು ನಿಮಗಾಗಿ ಹಣವನ್ನು  ಸಂಪಾದಿಸುವ ಅನೇಕ ಅವಕಾಶಗಳು ಉಂಟಾಗುತ್ತದೆ. ಸಂಬಂಧಿಗಳು ನಿಮ್ಮ ವರ್ತನೆಯ ಅನುಚಿತ ಲಾಭ ಪಡೆಯಲು ಪ್ರಯತ್ನಿಸುತ್ತಾರೆ.

*ಕುಂಭ ರಾಶಿ : ನಿಮ್ಮ ಅನಿರೀಕ್ಷಿತ ಸ್ವಭಾವ ನಿಮ್ಮ ವೈವಾಹಿಕ ಸಂಬಂಧವನ್ನು ಹಾಳು ಮಾಡಲು ಬಿಡಬೇಡಿ. ಇದನ್ನು ತಡೆಯಲು ಪ್ರಯತ್ನಿಸಿ. ಇಲ್ಲವಾದರೆ ನೀವು ನಂತರ ವಿಷಾಧಿಸಬಹುದು.

* ಮೀನ ರಾಶಿ : ಇಂದು ನಿಮ್ಮ ಜೊತೆ ಕೆಲವರು ಅವರಿಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ಭರವಸೆ ನೀಡುತ್ತಾರೆ. ಕೇವಲ ಮಾತನಾಡುವ  ಮತ್ತು ಯಾವುದೇ ಫಲಿತಾಂಶಗಳನ್ನು ನೀಡದ ಇಂಥ ಜನರನ್ನು ಮರೆತುಬಿಡಿ.

 

Share this Story:

Follow Webdunia kannada

ಮುಂದಿನ ಸುದ್ದಿ

24ತಾರೀಖಿನಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?