Select Your Language

Notifications

webdunia
webdunia
webdunia
webdunia

ಸಕಲ ಸಿದ್ಧಿಗಾಗಿ ಲಕ್ಷ್ಮೀದೇವಿಗೆ ತುಪ್ಪದ ದೀಪವನ್ನು ಹಚ್ಚುವಾಗ ಈ ನಿಯಮದ ಪ್ರಕಾರ ದೀಪ ಹಚ್ಚಿದರೆ ಉತ್ತಮ

ಸಕಲ ಸಿದ್ಧಿಗಾಗಿ ಲಕ್ಷ್ಮೀದೇವಿಗೆ ತುಪ್ಪದ ದೀಪವನ್ನು ಹಚ್ಚುವಾಗ ಈ ನಿಯಮದ ಪ್ರಕಾರ ದೀಪ ಹಚ್ಚಿದರೆ ಉತ್ತಮ
ಬೆಂಗಳೂರು , ಸೋಮವಾರ, 21 ಮೇ 2018 (16:09 IST)
ಬೆಂಗಳೂರು : ಹಿಂದೂಗಳ ಸಂಪ್ರದಾಯದಲ್ಲಿ ಅತೀ ಮುಖ್ಯವಾದುದು, ದೀಪಾರಾಧನೆ. ದೀಪ ಇಲ್ಲದ ಮನೆಯನ್ನು ಹಿಂದೂ ಧರ್ಮ ಒಪ್ಪುವುದಿಲ್ಲ. ಅಂತಹ ದೀಪ ಸಹ ನಮ್ಮ ಅನೇಕ ಒಳಿತನ್ನು ಮಾಡುತ್ತದೆ. ಅದರಲ್ಲಿ ಹಸುವಿನ ತುಪ್ಪದಲ್ಲಿ ದೀಪ ಬೇಳಗಿಸಿದರೆ ತುಂಬಾ ಶುಭದಾಯಕ ಎಂದು ಪಂಡಿತರು ಹೇಳುತ್ತಾರೆ.


ಹಸುವಿನ ತುಪ್ಪದಿಂದ ದೀಪವನ್ನು ಈ ರೀತಿಯಾಗಿ ಹಚ್ಚಬೇಕು :
ಮೊದಲು ದೀಪಸ್ತಂಭವನ್ನು ಸ್ವಚ್ಛಗೊಳಿಸಿಕೊಂಡು ಕುಂಕುಮವನ್ನು ಇಡಬೇಕು. ನಂತರ ಹಸುವಿನ ತುಪ್ಪ ಹಾಕಿ ಹತ್ತಿಯ ಬತ್ತಿಯನ್ನು ಹಾಕಬೇಕು. ಹಾಕಿದ ಮೇಲೆ ಕೇವಲ ಉದುಬತ್ತಿಯಿಂದ ದೀಪವನ್ನು ಹಚ್ಚಬೇಕು. ಬೆಂಕಿಕಡ್ಡಿಯನ್ನು ಹಚ್ಚಬಾರದು. ಹಚ್ಚಿದ ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು(ತಾಕಿಸಬಾರದು).


ಈ ದೀಪದಿಂದ ಆರ್ಥಿಕಾಭಿವೃದ್ಧಿಯಾಗುವುದಲ್ಲದೇ, ಸಾಲದ ಸುಳಿಯಿಂದ ಹೊರಬರುತ್ತವೆ. ಸಂಜೆ ಸಮಯದಲ್ಲಿ ಈ ದೀಪವನ್ನು ಲಕ್ಷ್ಮೀದೇವಿಗೆ ಹೆಚ್ಚುವುದರಿಂದ ನಿಮಗೆ ಬರಬೇಕಾಗಿರುವ ಹಣ ಯಾವುದೇ ತೊಂದರೆಯಿಲ್ಲದೇ ಬರುತ್ತವೆ. ಈ ದೀಪ ತಾಯಿ ಮಕ್ಕಳ ಜ್ಞಾನ ಅಭಿವೃದ್ಧಿಗೆ ಹಾಗೂ ಒಳ್ಳೆಯ ವಿದ್ಯಾವಂತರಾಗಲು ಸರಸ್ವತಿ ದೇವಿಯ ಮುಂದೆ ಹಚ್ಚಿದರೆ ಒಳ್ಳೆಯ ಫಲಿತಾಂಶ ಲಭಿಸುವುದು.

ಹೆಚ್ಚಾಗಿ ಹಸುವಿನ ತುಪ್ಪದ ದೀಪನ್ನು ಲಕ್ಷ್ಮಿ ಹಚ್ಚುತ್ತಾರೆ. ಯಾಕೆಂದರೆ ಆ ತಾಯಿಗೆ ಹಸುವಿನ ತುಪ್ಪ  ಎಂದರೆ ತುಂಬಾ ಇಷ್ಟ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯೆ, ಉದ್ಯೋಗ, ವ್ಯಾಪಾರಗಳಲ್ಲಿ ಸೋಲನ್ನು ಅನುಭವಿಸುತ್ತಿರುವವರು ಈ ವ್ರತಾ ಅಚರಣೆ ಮಾಡಬೇಕಂತೆ