Select Your Language

Notifications

webdunia
webdunia
webdunia
webdunia

ಪಿತೃಗಳಿಗೆ ಮರಣದ ದಿನ ಶ್ರಾದ್ಧ ಮಾಡಲು ಆಗದವರಿಗೆ ಈ ದಿನ ಪ್ರಶಸ್ತವಾಗಿದೆ

ಪಿತೃಗಳಿಗೆ ಮರಣದ  ದಿನ ಶ್ರಾದ್ಧ ಮಾಡಲು ಆಗದವರಿಗೆ ಈ ದಿನ ಪ್ರಶಸ್ತವಾಗಿದೆ
ಬೆಂಗಳೂರು , ಬುಧವಾರ, 26 ಡಿಸೆಂಬರ್ 2018 (07:08 IST)
ಬೆಂಗಳೂರು : ಪಿತೃಗಳ ಆತ್ಮಕ್ಕೆ ಶಾಂತಿ ದೊರಕಲು ಅವರು ಮರಣ  ಹೊಂದಿದ ದಿನ ಶ್ರಾದ್ಧವನ್ನು ಮಾಡಲಾಗುತ್ತದೆ. ಆದರೆ ಅಂದು ಶ್ರಾದ್ಧ ಮಾಡಲು ಆಗದವರು  ಈ ದಿನ ಶ್ರಾದ್ಧವನ್ನು ಮಾಡಬಹುದು.


ಹೌದು. ಪಿತೃಗಳಿಗೆ ಪಿತೃ ಪಕ್ಷದ ಅಮವಾಸ್ಯೆ(ಮಹಾಲಯ ಅಮವಾಸ್ಯೆ)ಯಂದು ಕೂಡ ಶ್ರಾದ್ದವನ್ನು ಮಾಡಬಹುದು. ಮಹಾಲಯ ಅಮವಾಸ್ಯೆಯಂದು ಬ್ರಾಹ್ಮಣರನ್ನು ಕರೆದು ಪದ್ಧತಿ ಪ್ರಕಾರ ಶ್ರಾದ್ಧ ಮಾಡಬೇಕು. ಶ್ರಾದ್ಧ ಮಾಡಲು ಉತ್ತಮ ಸಮಯ ಮಧ್ಯಾಹ್ನ. ಅಂದು ಬ್ರಾಹ್ಮಣರಿಗೆ ದಾನವನ್ನು ಕೂಡ ಮಾಡಬೇಕು.


ಶಾಸ್ತ್ರಗಳ ಪ್ರಕಾರ, ಅಶ್ವತ್ಥ ಮರದ ಪೂಜೆ ಮಾಡುವುದರಿಂದ ಪೂರ್ವಜರು ತೃಪ್ತರಾಗ್ತಾರಂತೆ. ಈ ದಿನ ಸ್ಟೀಲ್ ಲೋಟದಲ್ಲಿ ಹಾಲು, ನೀರು, ಕಪ್ಪು ಎಳ್ಳು, ಜೇನುತುಪ್ಪವನ್ನು ಹಾಕಿ. ಇದರ ಜೊತೆ ಬಿಳಿ ಬಣ್ಣದ ಸಿಹಿ, ಕೆಲ ನಾಣ್ಯವನ್ನು ಅಶ್ವತ್ಥ ಮರದ ಕೆಳಗೆ ಇಡಿ. ಎಲ್ಲಾ ಮಿಶ್ರಣವನ್ನು ಮರದ ಕೆಳಗೆ ಹಾಕಿ ಓಂ ಸರ್ವ್ ಪಿತೃ ದೇವತಾಭ್ಯೋ ನಮಃ ಮಂತ್ರವನ್ನು ಜಪಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಮನೆಯಲ್ಲಿ ಈ 5 ವಸ್ತುಗಳಿದ್ದರೆ ಮನೆಗೆ ಶ್ರೇಯಸ್ಸು