ಶಿವಪುರಾಣದ ಪ್ರಕಾರ ನಿಮಗೆ ಸಾವು ಸಮೀಪಿಸುತ್ತಿದೆ ಎಂದು ತಿಳಿಸುತ್ತೆ ಈ ಘಟನೆಗಳು

ಮಂಗಳವಾರ, 9 ಜುಲೈ 2019 (09:06 IST)
ಬೆಂಗಳೂರು : ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸಾಯಲೇ ಬೇಕು. ಆದರೆ ಈ ಸಾವು ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಶಿವಪುರಾಣದಲ್ಲಿ ಸಾವು ಸಂಭವಿಸುವ ಮೊದಲು ಕೆಲವು ಸೂಚನೆಗಳು ಸಿಗುತ್ತದೆಯಂತೆ. ಅದು ಯಾವುದೆಂಬುದು ಇಲ್ಲಿದೆ ನೋಡಿ.
* ಒಬ್ಬ ವ್ಯಕ್ತಿಯ ಶರೀರ ಕೆಂಪಾಗಿ ಬದಲಾಗುತ್ತಿದ್ದರೆ, ಆ ವ್ಯಕ್ತಿ ಆರು ತಿಂಗಳಲ್ಲಿ ಮರಣ ಹೊಂದುತ್ತಾನೆ ಎಂದರ್ಥ.

* ಒಬ್ಬ ವ್ಯಕ್ತಿ ನೀರಿನಲ್ಲಿ, ಇಲ್ಲ ಎಣ್ಣೆಯಲ್ಲಿ, ಅಥವಾ ಕನ್ನಡಿಯಲ್ಲಿ ಅವರ ಪ್ರತಿಬಿಂಬ ಕಾಣಿಸದೇ ಹೋದರೆ, ಆ ವ್ಯಕ್ತಿ ಆರು ತಿಂಗಳಲ್ಲಿ ಮರಣ ಹೊಂದುತ್ತಾನೆ ಎನ್ನುವ ಸೂಚನೆಯಾಗಿದೆ.

*ಯಾವ ವ್ಯಕ್ತಿಗೆ ತನ್ನ ನೆರಳು ಕಾಣಿಸುವದಿಲ್ಲವೋ ಅದರಲ್ಲೂ ನೆರಳಿನಲ್ಲಿ ತಲೆ ಕಾಣಿಸುವುದಿಲ್ಲವೋ ಆತನಿಗೆ ಸಾವು ಸಮೀಪಿಸುತ್ತಿದೆ ಎಂದರ್ಥವಂತೆ.

* ಒಬ್ಬ ವ್ಯಕ್ತಿಯ ಎಡಗೈ ವಾರದವರೆಗೂ ಹಿಡಿದಿದ್ದರೆ, ಇಲ್ಲ ನರಗಳು ಬಿಗಿ ಹಿಡಿದರೆ, ಆ ವ್ಯಕ್ತಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಬದುಕುವುದಿಲ್ಲ.

* ಒಬ್ಬ ವ್ಯಕ್ತಿ ಎಲ್ಲವನ್ನೂ ಕಪ್ಪಾಗಿ ನೋಡಲು ಪ್ರಾರಂಭಿಸಿದರೆ , ಆ ವ್ಯಕ್ತಿಯ ಸಾವು ಹತ್ತಿರದಲ್ಲಿ ಇದೆ ಎಂದು ಅರ್ಥ.

* ನಮ್ಮ ಕೈಯಲ್ಲಿರುವ ಜೀವನ ರೇಖೆ ನಾವು ಎಷ್ಟು ಕಾಲ ಬದುಕುತ್ತೇವೆ ಎಂದು ಹೇಳುತ್ತದೆ. ಯಾರಿಗಾದರೂ ತಮ್ಮ ಜೀವನ ರೇಖೆ ಕತ್ತರಿಸಿದ್ದರೆ , ಅವರು ಕಡಿಮೆ ಸಮಯ ಬದುಕುತ್ತಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಿತ್ತ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?