Select Your Language

Notifications

webdunia
webdunia
webdunia
webdunia

ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ

ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ
ಬೆಂಗಳೂರು , ಬುಧವಾರ, 9 ಮೇ 2018 (15:26 IST)
ವ್ಯಕ್ತಿಯ ಜೀವನದಲ್ಲಿ ಸೂರ್ಯ ಹಾಗು ಚಂದ್ರನ ಪಾತ್ರ ಮಹತ್ವವಾದುದು. ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ ಕಾಡಲು ಶುರುವಾಗುತ್ತದೆ.

ಸೂರ್ಯ ದೋಷದಿಂದ ತಲೆನೋವು, ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ, ಜ್ವರ, ನೌಕರಿಯಲ್ಲಿ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತದೆ. ಚಂದ್ರನ ದೋಷದಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ, ಧನಹಾನಿ, ಖಿನ್ನತೆ ಕಾಡುತ್ತಿರುತ್ತದೆ. 
 
ಶಾಸ್ತ್ರದ ಪ್ರಕಾರ ಸೂರ್ಯ ಹಾಗು ಚಂದ್ರನನ್ನು ಕೆಲವು ಸಮಯದಲ್ಲಿ ನೋಡಬಾರದಂತೆ. ಇದು ಕೂಡ  ದೋಷಕ್ಕೆ ಕಾರಣವಾಗುತ್ತದೆ. ಸೂರ್ಯ ಹಾಗು ಚಂದ್ರನನ್ನು ಮುಳುಗುವ ಸಮಯದಲ್ಲಿ ನೋಡಬಾರದಂತೆ. ಇದರಿಂದ ಕಣ್ಣಿನ ಸಮಸ್ಯೆ ಕಾಡುತ್ತದೆಯಂತೆ. ಇದನ್ನು ಶಾಸ್ತ್ರದಲ್ಲಿ ಕೂಡ ಅಪಶಕುನವೆಂದು ಪರಿಗಣಿಸಲಾಗಿದೆ.

ಆದರೆ ಸೂರ್ಯ ಉದಯಿಸುವುದನ್ನು ನೋಡಿದರೆ ಮಾತ್ರ ಒಳ್ಳೆಯದಂತೆ. ಸೂರ್ಯ ಉದಯಿಸಿದ ಮೇಲೂ ಮಲಗುವವರಿಗೆ ಲಕ್ಷ್ಮೀ ಕಟಾಕ್ಷ ದೊರೆಯುವುದಿಲ್ಲವಂತೆ. ಹಾಗೆ ಚಂದ್ರನನ್ನು ಹುಣ್ಣಿಮೆ ದಿನ ನೋಡಿದರೆ ಒಳ್ಳೆಯದಂತೆ. ಅಂದು ಚಂದ್ರನಿಗೆ ಪೂಜೆ ಸಲ್ಲಿಸಿದರೆ ಜೀವನ ಮಂಗಳಕರವಾಗುತ್ತದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಸ್ತುಶಾಸ್ತ್ರದ ಪ್ರಕಾರ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು? ಯಾಕೆ ಎಂಬುದು ತಿಳಿಬೇಕಾ?