Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ಗೆ ವಿಲನ್ ಆಗಿ ಮತ್ತೆ ಎಂಟ್ರಿ ಕೊಟ್ಟ ಬಾಲಿವುಡ್ ನಟ ನಾನಾ ಪಾಟೇಕರ್

ಸ್ಯಾಂಡಲ್ ವುಡ್ ಗೆ ವಿಲನ್ ಆಗಿ  ಮತ್ತೆ ಎಂಟ್ರಿ ಕೊಟ್ಟ ಬಾಲಿವುಡ್ ನಟ ನಾನಾ ಪಾಟೇಕರ್
ಬೆಂಗಳೂರು , ಬುಧವಾರ, 9 ಮೇ 2018 (15:00 IST)
ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ರವಿಚಂದ್ರನ್ ಅಭಿನಯಿಸುತ್ತಿರುವ ಕನ್ನಡದ ‘ಚಿಲ್ಲಂ’ ಚಿತ್ರದಲ್ಲಿ ಇದೀಗ ಬಾಲಿವುಡ್ ನ ಸ್ಟಾರ್ ನಟರೊಬ್ಬರು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.


ಈ ಮೊದಲು ಕನ್ನಡದ ಖ್ಯಾತ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಇದೀಗ ಬಾಲಿವುಡ್ ನ ನಟ ನಾನಾ ಪಾಟೇಕರ್ ಅವರು ಕೂಡ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ತಿಳಿದುಬಂದಿದೆ.  


ಲೂಸ್ ಮಾದ ಯೋಗಿ ಅವರ 'ಯಕ್ಷ' ಸಿನಿಮಾದಲ್ಲಿ ನಟಿಸಿದ ನಾನಾ ಪಾಟೇಕರ್ ಅವರು ಇದೀಗ ಈ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಕೆಂಪ ಚಿತ್ರದ ಬೆಡಗಿ ಪ್ರಿಯಾಂಕಾ ನಾಯಕಿಯಾಗಿ ಅಭಿನಯಿಸುತ್ತಿದ್ದು , ಬಿಗ್ ಬಾಸ್ ಸೀಸನ್ 5ರ ರನ್ನರ್ ಅಪ್ ಆಗಿದ್ದ ದಿವಾಕರ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಸಹೋದರ ಸುದೀಪ್ ರನ್ನು ಭೇಟಿ ಮಾಡಿದ್ದು ಯಾಕೆ…?