Select Your Language

Notifications

webdunia
webdunia
webdunia
webdunia

ವಾಸ್ತುಶಾಸ್ತ್ರದ ಪ್ರಕಾರ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು? ಯಾಕೆ ಎಂಬುದು ತಿಳಿಬೇಕಾ?

ವಾಸ್ತುಶಾಸ್ತ್ರದ ಪ್ರಕಾರ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು? ಯಾಕೆ ಎಂಬುದು ತಿಳಿಬೇಕಾ?
ಬೆಂಗಳೂರು , ಬುಧವಾರ, 9 ಮೇ 2018 (14:07 IST)
ಬೆಂಗಳೂರು : ನಿದ್ರೆ ಬಂದ ತಕ್ಷಣ ಎಲ್ಲೆಂದರಲ್ಲಿ ದಿಕ್ಕುಗಳನ್ನು ಲೆಕ್ಕಿಸದೇ ಮಲಗುತ್ತೇವೆ. ಆದರೆ ತಲೆಯನ್ನು ಈ ಒಂದು ದಿಕ್ಕಿಗೆ ಇಟ್ಟು ಮಲಗಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಇದರಿಂದ ವಾಸ್ತುದೋಷ ಉಂಟಾಗುತ್ತದೆ. ಅನಾರೋಗ್ಯ ಸಮಸ್ಯೆಗಳು ಸಹ ತಲೆಯೆತ್ತುತ್ತವೆ. ಹಾಗಾದ್ರೆ ವಾಸ್ತು ಪ್ರಕಾರ ತಲೆಯನ್ನು ಯಾವ ದಿಕ್ಕಿಗೆ ಇಟ್ಟು ನಿದ್ರಿಸಿದರೆ ಉತ್ತಮ, ಯಾವ ದಿಕ್ಕಿಗೆ ತಲೆಯನ್ನು ಇಡಬಾರದು ಎಂಬುದನ್ನು ಈಗ ತಿಳಿದುಕೊಳ್ಳೋಣ.


ಭೂಮಿಗೆ ಅಯಸ್ಕಾಂತ ಕ್ಷೇತ್ರ ಇರುತ್ತದೆ. ಹಾಗೇ ಉತ್ತರ, ದಕ್ಷಿಣ ಧ್ರುವಗಳು ಸಹ ಇರುತ್ತವೆ. ಇವು ಅಯಸ್ಕಾಂತ ಕ್ಷೇತ್ರಗಳಂತೆ ಕೆಲಸ ಮಾಡುತ್ತವೆ. ಅದೇ ರೀತಿ ಮನುಷ್ಯರಲ್ಲೂ ಅಯಸ್ಕಾಂತ ಕ್ಷೇತ್ರ ಇರುತ್ತದೆ. ತಲೆ ಕಡೆಗೆ ಉತ್ತರ ದಿಕ್ಕಿನ ಕ್ಷೇತ್ರ, ಕಾಲಿನ ಕಡೆಗೆ ದಕ್ಷಿಣ ಕ್ಷೇತ್ರ ಇರುತ್ತದೆ.


ಉತ್ತರ ದಿಕ್ಕಿಗೆ ತಲೆ ಇಟ್ಟು ನಿದ್ರಿಸುವುದರಿಂದ ಅಯಸ್ಕಾಂತ ಕ್ಷೇತ್ರದ ಪ್ರಭಾವ ದೇಹದ ಮೇಲೆ ಬೀಳುತ್ತದೆ. ಇದರಿಂದ ಬಿಪಿ ಹೆಚ್ಚುತ್ತದೆ. ಹೃದಯ ಸಮಸ್ಯೆಗಳು ತಲೆಯೆತ್ತುತ್ತವೆ. ರಕ್ತನಾಳಗಳಲ್ಲಿ ರಕ್ತ ಗಡ್ಡೆಕಟ್ಟುತ್ತದೆ. ಸ್ಟ್ರೋಕ್ ಆಗುವ ಸಾಧ್ಯತೆಗಳಿರುತ್ತವೆ. ಹೃದಯ ಸರಿಯಾಗಿ ಹೊಡೆದುಕೊಳ್ಳುವುದಿಲ್ಲ. ಇದರ ಜತೆಗೆ ನಿದ್ರಾಹೀನತೆ, ಒತ್ತಡ, ಆತಂಕ ಎದುರಾಗುತ್ತದೆ. ಆದಕಾರಣ ಉತ್ತರ ದಿಕ್ಕಿನಲ್ಲಿ ತಲೆ ಇಟ್ಟು ನಿದ್ರಿಸಬಾರದು. ಆದರೆ ಇನ್ಯಾವ ದಿಕ್ಕಿನೆಡೆಗೆ ತಲೆ ಇಡಬಹುದು ಎಂದರೆ ಎಲ್ಲಾ ದಿಕ್ಕುಗಳಲ್ಲೂ ತಲೆಯನ್ನಿಟ್ಟು ನಿದ್ರಿಸಬಹುದು. ಆದರೆ ಉತ್ತರ ದಿಕ್ಕಿಗೆ ಮಾತ್ರ ತಲೆಯನ್ನಿಡಬಾರದು ಎಂದು ವಾಸ್ತುಶಾಸ್ತ್ರ ತಿಳಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಒಂದು ದಿನ ಶಿವನನ್ನು ಪೂಜಿಸಿದರೆ ಏನಾಗುತ್ತೇ ಗೊತ್ತಾ?