Select Your Language

Notifications

webdunia
webdunia
webdunia
webdunia

ಊಟ ಆದ ತಕ್ಷಣ ನೀರು ಕುಡಿದರೆ ಒಳ್ಳೆಯದೇ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ

ಊಟ ಆದ ತಕ್ಷಣ ನೀರು ಕುಡಿದರೆ ಒಳ್ಳೆಯದೇ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ
ಬೆಂಗಳೂರು , ಮಂಗಳವಾರ, 8 ಮೇ 2018 (06:50 IST)
ಬೆಂಗಳೂರು : ನೀರು ನಮ್ಮ ಜೀವನದಲ್ಲಿ ಅತ್ಯಮೂಲ್ಯವಾದ ಪಾತ್ರವನ್ನ ವಹಿಸುತ್ತದೆ. ನೀರಿಲ್ಲದೆ ಯಾವ ಜೀವಿಯು ಬದುಕಲು ಸಾಧ್ಯವಿಲ್ಲ, ಒಂದು ವೇಳೆ ಊಟವಿಲ್ಲದಿದ್ದರು ಬದುಕಬಹುದು, ಆದರೆ ನೀರಿಲ್ಲದೆ ಬದುಕುವುದು ಕಷ್ಟಕರ. ಕೆಲವರಿಗೆ ಊಟದ ಜೊತೆ ಇನ್ನು ಕೆಲವರಿಗೆ ಊಟವಾದ ತಕ್ಷಣವೇ ನೀರು ಕುಡಿಯುವ ಅಭ್ಯಾಸವಿರುತ್ತದೆ. ಈ ವಿಚಾರದಲ್ಲಿ ಒಬ್ಬೊಬ್ಬರದ್ದು ಒಂದೊಂದು ವಾದ. ನಿಜವಾಗ್ಲೂ ಯಾವಾಗ ನೀರು ಕುಡಿದರೆ ಒಳ್ಳೆಯದು ಎಂಬ ಗೊಂದಲ ಹಲವರಲ್ಲಿದೆ.


ಊಟ ಮಾಡುವ ಕೆಲವು ನಿಮಿಷಗಳ ಮೊದಲು ನೀರು ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ ತಿಳಿದಂತವರು. ಹೀಗೆ ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ನಿಗದಿತ ಸಮಯಕ್ಕಿಂತ ಬೇಗನೆ ಆಗುತ್ತದೆ. ಇದರಿಂದ ಅಸಿಡಿಟಿ ಸಮಸ್ಯೆ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ.


ಇನ್ನು ಕೆಲವರು ಊಟದ ಜೊತೆ ಜೊತೆಯಾಗಿ ನೀರು ಕುಡಿಯುತ್ತಾರೆ. ಈ ರೀತಿ ಊಟದ ಜೊತೆ ನೀರು ಸೇವಿಸುವುದರಿಂದಲೂ ಅದು ಜೊಲ್ಲು ರಸ ಬಿಡುಗಡೆಗೆ ಅಡ್ಡಿ ಮಾಡುವುದರಿಂದ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಹಾಗಂತ ಊಟದ ತಟ್ಟೆ ಖಾಲಿ ಮಾಡಿದ ತಕ್ಷಣ ನೀರು ಸೇವಿಸುವುದರಿಂದಲೂ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದಂತೆ.


ಇದನ್ನೆಲ್ಲಾ ಓದಿದ ಮೇಲೆ ನೀರು ಯಾವಾಗ ಕುಡಿಯಬೇಕು ಎಂಬ ಗೊಂದಲ ಇನ್ನಷ್ಟು ಹೆಚ್ಚಾಗಿರುತ್ತದೆ. ಊಟವಾದ ಮೇಲೆ ಮೊದಲ ಹಂತದ ಜೀರ್ಣಕ್ರಿಯೆ ಮುಗಿಯಲು 30 ನಿಮಿಷ ಬೇಕಂತೆ, ಇದಾದ ಬಳಿಕ ನೀರು ಕುಡಿದರೆ ಉತ್ತಮ ಜೀರ್ಣಕ್ರಿಯೆಗೂ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಾರೆ ತಜ್ಞರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯಪಾನ ಮಾಡುವವರು ತಮ್ಮ ಲಿವರ್ ಅನ್ನು ಶುಚಿಯಾಗಿಸಿಕೊಳ್ಳಲು ಹೀಗೆ ಮಾಡಿ