Select Your Language

Notifications

webdunia
webdunia
webdunia
webdunia

ಶಿವಾಲಯದಲ್ಲಿ ಮೊದಲು ದರ್ಶಿಸಬೇಕಾಗಿರುವುದು ಶಿವನಾ ಅಥವಾ ನವಗ್ರಹನಾ? ಇಲ್ಲಿದೆ ಉತ್ತರ

ಶಿವಾಲಯದಲ್ಲಿ ಮೊದಲು ದರ್ಶಿಸಬೇಕಾಗಿರುವುದು ಶಿವನಾ ಅಥವಾ ನವಗ್ರಹನಾ? ಇಲ್ಲಿದೆ ಉತ್ತರ
ಬೆಂಗಳೂರು , ಭಾನುವಾರ, 29 ಏಪ್ರಿಲ್ 2018 (06:05 IST)
ಬೆಂಗಳೂರು : ಶಿವನ್ನು ಲಿಂಗರೂಪದಲ್ಲಿ ನೆಲೆಸಿರುವ ಪ್ರಸಿದ್ಧ ದೇವಾಲಯಗಳು ನಮ್ಮ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಪ್ರತಿ ಶಿವಾಲಯದಲ್ಲೂ ನವಗ್ರಹಗಳು ಇದ್ದೇ ಇರುತ್ತವೆ. ಅದರೆ ನಮ್ಮಲ್ಲಿ ಬಹಳಷ್ಟು ಮಂದಿಗೆ ಮೊದಲು ನವಗ್ರಹಗಳಿಗೆ ಪ್ರದಕ್ಷಿಣೆ ಮಾಡಿ ಬಳಿಕ ಶಿವನ ದರ್ಶನ ಮಾಡಿಕೊಳ್ಳಬೇಕೆ? ಅಥವಾ ಶಿವನನ್ನು ದರ್ಶಿಸಿಕೊಂಡ ಬಳಿಕ ನವಗ್ರಹಗಳನ್ನು ದರ್ಶನ ಮಾಡಿಕೊಳ್ಳಬೇಕೆ ಎಂಬ ಸಂದೇಹ ಬರುತ್ತದೆ. ಹಾಗಿದ್ದರೆ ಶಿವಾಲಯಕ್ಕೆ ಹೋದಾಗ ಮೊದಲು ಯಾರನ್ನು ದರ್ಶಿಸಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಈಗ ತಿಳಿದುಕೊಳ್ಳೋಣ.


ಶಿವನು ಆದಿದೇವ, ಪಾಲಕ, ಕರ್ತವ್ಯವನ್ನು ಬೋಧಿಸುವವ. ನವಗ್ರಹಗಳೆಲ್ಲಾ ಶಿವನ ಅಧೀನದಲ್ಲೇ ಇರುತ್ತವೆ ಎನ್ನುತ್ತಾರೆ. ಆದಕಾರಣ ಮೊದಲು ಶಿವನನ್ನು ದರ್ಶಿಸಿಕೊಳ್ಳಬೇಕು ಎಂಬುದು ಕೆಲವರ ವಾದ. ನವಗ್ರಹಗಳಿಗೆ ಪ್ರದಕ್ಷಿಣೆ ಮಾಡಿದ ಬಳಿಕ ಕಡ್ಡಾಯವಾಗಿ ಕಾಲುಗಳನ್ನು ತೊಳೆದುಕೊಳ್ಳಬೇಕು. ಆದರೆ ಶಿವನನ್ನು ದರ್ಶಿಸಿಕೊಂಡ ಬಳಿಕ ಕಾಲುಗಳನ್ನು ತೊಳೆದುಕೊಳ್ಳಬಾರದು. ಮೊದಲು ನವಗ್ರಹಗಳನ್ನು ದರ್ಶಿಸಿಕೊಂಡು, ಪ್ರದಕ್ಷಿಣೆ ಮಾಡಿದ ಬಳಿಕವಷ್ಟೇ ಶಿವನನ್ನು ದರ್ಶಿಸಿಕೊಳ್ಳಬೇಕೆಂಬ ವಾದವೂ ಇದೆ.


ಅದೇನೇ ಇರಲಿ ಮೊದಲು ಯಾರನ್ನು ದರ್ಶಿಸಿಕೊಂಡ ಬಳಿಕ ಯಾರನ್ನು ದರ್ಶಿಸಿಕೊಂಡರೂ ನವಗ್ರಹಗಳ ಮತ್ತು ಶಿವನ ಅನುಗ್ರಕ್ಕೆ ಮಾತ್ರ ಯಾವುದೇ ಕೊರತೆ ಇರಲ್ಲ ಎಂದು ನಮ್ಮ ಪೂರ್ವಿಕರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಥಸಪ್ತಮಿ ದಿನ ಈ ಕೆಲಸಗಳನ್ನು ಮಾಡಿದರೆ ನಿಮಗೆ ಶ್ರೇಯಸ್ಕರ