Publish Date: Sat, 14 Sep 2024 (08:20 IST)
Updated Date: Sat, 14 Sep 2024 (08:24 IST)
ಬೆಂಗಳೂರು: ಇಂದು ಶನಿವಾರವಾಗಿದ್ದು, ಶನಿ ದೇವನಿಗೆ ವಿಶೇಷವಾದ ದಿನವಾಗಿದೆ. ಶನಿ ದೋಷ ನಿಮ್ಮನ್ನು ಕಾಡುತ್ತಿದ್ದರೆ ಶನಿ ದೇವನಿಗೆ ಈ ಮಂತ್ರಗಳನ್ನು ಪಠಿಸಿ ಅವನ ವಕ್ರದೃಷ್ಟಿಯಿಂದ ಪಾರಾಗಬಹುದು.
ಶನಿಯು ದೋಷಪೂರಿತನಾಗಿದ್ದರೆ ನಮಗೆ ಜೀವನದಲ್ಲಿ ಅನೇಕ ಕಷ್ಟ-ನಷ್ಟಗಳನ್ನು ತಂದೊಡ್ಡುತ್ತಾನೆ. ಹಣಕಾಸಿನ ನಷ್ಟ, ದೈಹಿಕ ನೋವು, ಸಂಬಂಧಗಳಲ್ಲಿ ಬಿರುಕು, ಉದ್ಯೋಗದಲ್ಲಿ ತೊಡಕು, ಅಪವಾದದ ಭೀತಿ ಇತ್ಯಾದಿ ಸಮಸ್ಯೆಗಳು ಶನಿ ದೋಷದಿಂದ ಬರಬಹುದು.
ಆದರೆ ಶನಿ ಲಾಭಕಾರಕನಾದರೆ ಅತ್ಯಂತ ಶುಭ ಫಲಗಳನ್ನೇ ನೀಡುವನು. ಉದ್ಯೋಗದಲ್ಲಿ ಅಭಿವೃದ್ಧಿ, ಹಣಕಾಸಿನ ಗಳಿಕೆ, ಯಶಸ್ಸು ನಿಮ್ಮದಾಗುವುದು. ಆದರೆ ಶನಿ ದೋಷ ನಿವಾರಣೆಯಾಗಿ ಶನಿಯ ಶುಭ ಫಲಗಳನ್ನು ಪಡೆಯಬೇಕಾದರೆ ಈ ಮಂತ್ರಗಳನ್ನು ಪಠಿಸುವುದು ಉತ್ತಮ. ಅವುಗಳು ಯಾವುವೆಂದರೆ:
ಓಂ ಕಾಕಧ್ವಜಾಯ ವಿದ್ಮಹೇ
ಖಡ್ಗಹಸ್ತಾಯ ಧೀಮಹಿ, ತನ್ನೋ ಮಂದ ಪ್ರಚೋದಯಾತ್
ಅಥವಾ
ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ
ಛಾಯಾಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ
ಪ್ರತಿನಿತ್ಯ ಪಶ್ಚಿಮ ಅಥವಾ ಪೂರ್ವಾಭಿಮುಖವಾಗಿ ಕುಳಿತು ಕೈಯಲ್ಲಿ ರುದ್ರಾಕ್ಷಿ ಸರ ಹಿಡಿದು ನೀಲಿ ಬಣ್ಣದ ಬಟ್ಟೆ ಧರಿಸಿ ಈ ಮಂತ್ರಗಳನ್ನು ಪಠಿಸಿದರೆ ಶನೀಶ್ವರನ ಕೃಪೆಗೆ ಪಾತ್ರರಾಗುತ್ತೀರಿ.