ಬೆಂಗಳೂರು: ಶುಕ್ರವಾರವೆಂದರೆ ಲಕ್ಷ್ಮೀ ದೇವಿಯ ದಿನವೆಂದೇ ಪರಿಗಣಿತವಾಗಿದೆ. ಈ ದಿನ ಲಕ್ಷ್ಮೀ ದೇವಿಯ ಈ ಕೆಲವು ಮಂತ್ರ ಹೇಳಿ ಪೂಜೆ ಮಾಡಿದರೆ ಸುಖ-ಸಮೃದ್ಧಿ ನಿಮ್ಮದಾಗುತ್ತದೆ.
ಲಕ್ಷ್ಮೀ ದೇವಿಗೆ ಬಿಳಿ ಬಣ್ಣವೆಂದರೆ ತುಂಬಾ ಇಷ್ಟ. ಹೀಗಾಗಿ ಇಂದು ಶ್ವೇತವರ್ಣದ ವಸ್ತ್ರ ಧರಿಸುವುದು, ಬಿಳಿ ಹೂವುಗಳಿಂದ ದೇವಿಯನ್ನು ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವೆಂದು ಹೇಳಲಾಗುತ್ತದೆ. ಲಕ್ಷ್ಮೀ ಸುಖ, ಸಮೃದ್ಧಿಯ ಜೊತೆಗೆ ಅದೃಷ್ಟ ದೇವತೆಯೂ ಆಗಿದ್ದು, ಆಕೆಯನ್ನು ಒಲಿಸಿಕೊಳ್ಳುವುದು ತುಂಬಾ ಮುಖ್ಯ.
ಅದಕ್ಕಾಗಿ ಈ ಮಂತ್ರಗಳನ್ನು ಹೇಳಿ:
ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮೈ ನಮಃ
ಪದ್ಮಾನನೇ ಪದ್ಮ ಪದ್ಮಾಕ್ಷೀ ಪದ್ಮ ಸಂಭವೇ ತನ್ಮೇ ಭಜಸಿ ಪದ್ಮಾಕ್ಷಿ ಯೇನ ಸೌಖ್ಯಂ ಲಭಾಮ್ಯಹಂ
ಓಂ ಹ್ರೀಂ ಶ್ರೀಂ ಕ್ರೀಂ ಕ್ಲೀಂ ಶ್ರೀ ಲಕ್ಷ್ಮೀ ಮಾಂ
ಗೃಹೇ ಧನ ಪೂರಯೇ ಧನ ಪೂರಯೇ
ಚಿಂತಾಯೇಂ ದೂರಯೇ ದೂರಯೇ ಸ್ವಾಹಾಃ
ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಬಯಸುವವರು ಶುಕ್ರವಾರಗಳಂದು ಲಕ್ಷ್ಮೀ ದೇವಿಗೆ ಈ ಮಂತ್ರಗಳನ್ನು ಹೇಳಿ ಪೂಜೆ ಮಾಡುವುದರ ಜೊತೆಗೆ ಬಿಳಿ ಬಣ್ಣದ ಆಹಾರ ವಸ್ತುವಿನಿಂದ ನೈವೈದ್ಯ ಮಾಡಿ ಕನ್ಯೆಯರಿಗೆ ಆಹಾರವನ್ನು ಅರ್ಪಿಸಬೇಕು. ಶುಕ್ರವಾರದಂದು ಲಕ್ಷ್ಮೀ ದೇವಿಗೆ ಆರತಿ ಮಾಡಿ ಭಕ್ತಿಯಿಂದ ಪೂಜೆ ಮಾಡಿದರೆ ಆಕೆಯ ಕೃಪಾಕಟಾಕ್ಷ ನಿಮಗೆ ಸಿಗುವುದು.