Select Your Language

Notifications

webdunia
webdunia
webdunia
webdunia

Shani Dasha Horoscope 2025: ವೃಶ್ಚಿಕ ರಾಶಿಯವರಿಗೆ ಶನಿ ಗ್ರಹಚಾರ ಈ ವರ್ಷ ಇರುತ್ತಾ

Astrology

Krishnaveni K

ಬೆಂಗಳೂರು , ಗುರುವಾರ, 28 ನವೆಂಬರ್ 2024 (09:51 IST)
ಬೆಂಗಳೂರು: ವೃಶ್ಚಿಕ ರಾಶಿಯವರಿಗೆ 2025 ನೇ ವರ್ಷದಲ್ಲಿ ಶನಿ ದೆಶೆ ಇರುತ್ತದಾ, ಇದ್ದರೆ ಏನು ಫಲವಿರುತ್ತದೆ, ಇಲ್ಲದೇ ಇದ್ದರೆ ಏನು ಫಲ ಇಲ್ಲಿದೆ ಸಂಪೂರ್ಣ ವಿವರ.

ಶನಿಯು 2025 ರಲ್ಲಿ ಕುಂಭ ರಾಶಿಯಿಂದ ಮೀನ ರಾಶಿಗೆ ಚಲಿಸುತ್ತಾನೆ. ಇದರಿಂದಾಗಿ ಕೆಲವೊಂದು ರಾಶಿಗೆ ಒಳಿತಾಗಲಿದೆ. ವೃಶ್ಚಿಕ ರಾಶಿಯವರಿಗೆ 2025 ರಲ್ಲಿ ಶನಿ ದೆಶೆಯು ಮುಕ್ತಾಯವಾಗಲಿದ್ದು, ಮುಂದೆ ಒಳ್ಳೆಯ ಅಭಿವೃದ್ಧಿದಾಯಕ ದಿನವಾಗಿರಲಿದೆ.

ವೃಶ್ಚಿಕ ರಾಶಿಯವರಿಗೆ ಇದುವರೆಗೆ ಇದ್ದ ಶನಿ ದೆಸೆಯು ಈ ವರ್ಷ ಮುಕ್ತಾಯವಾಗಲಿದೆ. ಇದುವರೆಗೆ ವೃಶ್ಚಿಕ ರಾಶಿಯವರಿಗೆ ಶನಿ ದೆಸೆಯಿಂದಾಗಿ ವಿವಾಹಕ್ಕೆ ವಿಘ್ನ ,ಪ್ರೇಮ  ವೈಫಲ್ಯ ಕಾಡುತ್ತಿದ್ದಿರಬಹುದು. ಆದರೆ ಈ ವರ್ಷ ಇದೆಲ್ಲದಕ್ಕೂ ಮುಕ್ತಿಯಿರಲಿದೆ.

ಶನಿಯಿಂದ ಮುಕ್ತಿ ಸಿಗುವುದರಿಂದ ವಿವಾಹ ಪ್ರಯತ್ನಕ್ಕೆ ಯಶಸ್ಸು ಸಿಗುವುದು. ಸಂಗಾತಿಯೊಂದಿಗಿನ ಹಿಂದಿನ ಭಿನ್ನಾಭಿಪ್ರಾಯಗಳು ದೂರವಾಗಲಿದೆ. ಮನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಿದ್ದೀರಿ. ಉದ್ಯೋಗದಲ್ಲಿ ಕೆಲವೊಂದು ಸವಾಲುಗಳು ಎದುರಾದರೂ ಅಂತಿಮವಾಗಿ ಗೆಲುವು ನಿಮ್ಮದೇ ಆಗಿರಲಿದೆ. ವಾದ-ವಿವಾದಗಳಿಂದ ದೂರವಿದ್ದರೆ ನಿಮಗೇ ಒಳಿತು.

Share this Story:

Follow Webdunia kannada

ಮುಂದಿನ ಸುದ್ದಿ

Shani Dasha horoscope 2025: ತುಲಾ ರಾಶಿಯವರಿಗೆ ಈ ವರ್ಷ ಶನಿಯಿಂದ ಲಾಭ ಯಾಕೆ