Select Your Language

Notifications

webdunia
webdunia
webdunia
webdunia

Horoscope 2025: ಕರ್ಕಟಕ ರಾಶಿಯವರಿಗೆ 2025 ಕೌಟುಂಬಿಕ ಶುಭ ಯೋಗ

Astrology

Krishnaveni K

ಬೆಂಗಳೂರು , ಸೋಮವಾರ, 25 ನವೆಂಬರ್ 2024 (08:55 IST)
ಬೆಂಗಳೂರು: ಕರ್ಕಟ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಸಮಾಧಾನಕರ ವಾತಾವರಣವಿರಲಿದ್ದು, ಈ ವರ್ಷ ಶುಭದಾಯಕವಾಗಿರಲಿದೆ.

2025 ನೇ ವರ್ಷ ಕರ್ಕಟಕ ರಾಶಿಯವರಿಗೆ ಕೌಟುಂಬಿಕವಾಗಿ ಶುಭದಾಯಕವಾದ ವರ್ಷವಾಗಿದೆ. ಮನೆಯಲ್ಲಿ ಸಂಗಾತಿ, ಮಕ್ಕಳು, ಪೋಷಕರೊಂದಿಗೆ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ವರ್ಷದ ಆರಂಭದಲ್ಲೇ ಶುಭ ಫಲಗಳಿವೆ.

ಗುರುವಿನ ದೆಸೆಯಿಂದ ವರ್ಷದ ಆರಂಭದಲ್ಲೇ ಇದುವರೆಗೆ ಇದ್ದ ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಿದ್ದೀರಿ. ನಿಮ್ಮ ಕುಟುಂಬದವರೊಂದಿಗೆ ಕಿರು ಪ್ರವಾಸ ಮಾಡಲಿದ್ದೀರಿ. ಮಾನಸಿಕವಾಗಿ ರಿಲ್ಯಾಕ್ಸ್ ಆಗಿರಲಿದ್ದೀರಿ. ವಿದೇಶ ಯಾನ ಯೋಗವೂ ಇದೆ.

ಜೂನ್ ಬಳಿಕ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯಾಗಬಹುದು. ಹೊಸ ಮನೆ ಕಟ್ಟುವ ಯೋಚನೆಯಿದ್ದರೆ ಕಾರ್ಯಗತಗೊಳಿಸಲಿದ್ದೀರಿ. ಹೊಸ ವಾಹನ ಖರೀದಿ ಮಾಡುವ ಯೋಗ ನಿಮ್ಮದಾಗುವುದು. ಮಕ್ಕಳ ವಿಚಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಸುಮಧುರವಾಗಿರಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುವುದು. ಆದರೆ ಯಾವುದೇ ಹೊಸ ಹೂಡಿಕೆ, ಯೋಜನೆ ಕಾರ್ಯರೂಪಕ್ಕೆ ತರುವ ಮೊದಲು ಮನೆಯವರೊಂದಿಗೆ ಚರ್ಚಿಸಿ ಮುಂದುವರಿಯುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

Horoscipe 2025: ಮಿಥುನ ರಾಶಿಯವರಿಗೆ 2025 ರಲ್ಲಿ ಕುಟುಂಬದವರಿಂದ ಇವುಗಳನ್ನು ನಿರೀಕ್ಷಿಸಬಹುದು