Select Your Language

Notifications

webdunia
webdunia
webdunia
webdunia

Horoscipe 2025: ಮಿಥುನ ರಾಶಿಯವರಿಗೆ 2025 ರಲ್ಲಿ ಕುಟುಂಬದವರಿಂದ ಇವುಗಳನ್ನು ನಿರೀಕ್ಷಿಸಬಹುದು

Astrology

Krishnaveni K

ಬೆಂಗಳೂರು , ಸೋಮವಾರ, 25 ನವೆಂಬರ್ 2024 (08:52 IST)
ಬೆಂಗಳೂರು: ಮಿಥುನ ರಾಶಿಯವರಿಗೆ 2025 ರ ವರ್ಷ ಕೌಟುಂಬಿಕವಾಗಿ ಏರಿಳಿತದ ವರ್ಷವಾಗಿದೆ. ಈ ವರ್ಷ ಕುಟುಂಬದಿಂದ ಏನನ್ನು ನಿರೀಕ್ಷಿಸಬಹುದು ಇಲ್ಲಿದೆ ವಿವರ.

ಮಿಥುನ ರಾಶಿಯವರಿಗೆ 2025 ನೇ ವರ್ಷ ಆರಂಭದಲ್ಲಿ ಕೆಲವು ಕಠಿಣ ಸನ್ನಿವೇಶಗಳಿದ್ದರೂ ವರ್ಷದ ದ್ವಿತೀಯಾರ್ಧದಲ್ಲಿ ಉತ್ತಮ ಫಲಗಳನ್ನು ಕಾಣುವ ಯೋಗವಿದೆ. ಕೌಟುಂಬಿಕವಾಗಿ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.

ನಿಮ್ಮ ಸಹೋದರ ಅಥವಾ ಸಹೋದರಿಯೊಂದಿಗೆ ಭಿನ್ನಾಭಿಪ್ರಾಯಗಳು ಕಂಡುಬಂದೀತು. ಇದರಿಂದಾಗಿ ಸಂಬಂಧ ಕೆಡಬಹುದು. ಆದರೆ ಮೇ ಬಳಿಕ ಪರಿಸ್ಥಿತಿ ಸುಧಾರಿಸಲಿದ್ದು, ಭಿನ್ನಾಭಿಪ್ರಾಯಗಳು ದೂರವಾಗಲಿದೆ. ಕುಟುಂಬದವರೊಂದಿಗೆ ಪ್ರವಾಸ ಮಾಡುವ ಯೋಗವಿದೆ.

ಜುಲೈನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಮಕ್ಕಳಿಂದ ಶುಭ ಫಲಗಳನ್ನು ಪಡೆಯಲಿದ್ದೀರಿ. ಸಂತೋಷದ ವಾರ್ತೆ ಕೇಳಿಬಂದೀತು. ವರ್ಷದ ಮಧ್ಯಾವಧಿಯಲ್ಲಿ ಪತ್ನಿ ಗರ್ಭವತಿಯಾಗುವ ಶುಭ ಸಮಾಚಾರವನ್ನು ಕೇಳಲಿದ್ದೀರಿ. ವರ್ಷಾಂತ್ಯದ ವೇಳೆಗೆ ನಿಮ್ಮ ಕೌಟುಂಬಿಕ ಭಿನ್ನಾಭಿಪ್ರಾಯ, ಮನಸ್ತಾಪಗಳು ದೂರವಾಗಿ ಸಂತೋಷದ ಸಮಯ ಕಳೆಯಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

Horoscope 2025: ವೃಷಭ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕ ಸಂಭದದಲ್ಲಿ ಏನಾಗಲಿದೆ ನೋಡಿ