Select Your Language

Notifications

webdunia
webdunia
webdunia
webdunia

Shani Dasha horoscope 2025: ಕನ್ಯಾ ರಾಶಿಯವರಿಗೆ ಶನಿಯ ದೃಷ್ಟಿಯಿದೆಯೇ

Astrology

Krishnaveni K

ಬೆಂಗಳೂರು , ಗುರುವಾರ, 28 ನವೆಂಬರ್ 2024 (09:44 IST)
ಬೆಂಗಳೂರು: ಕನ್ಯಾ ರಾಶಿಯವರಿಗೆ ಈ ವರ್ಷ ಶನಿ ದೆಶೆಯ ಯೋಗವಿದೆಯೇ? ಇದ್ದರೆ ಅದು ಯಾವ ರೀತಿ ಪರಿಣಾಮ ಬೀರಲಿದೆ ಮತ್ತು ಯಾವ ರೀತಿ ಅಭಿವೃದ್ಧಿ ಪಡೆಯಲಿದ್ದೀರಿ ಇಲ್ಲಿದೆ ವಿವರ.

ಕನ್ಯಾ ರಾಶಿಯವರಿಗೆ ಈ ವರ್ಷ ಶನಿ ದೆಸೆಯ ಯೋಗವಿಲ್ಲ. 2025 ರಲ್ಲಿ ಶನಿಯ ಚಲನೆಯಿಂದಾಗಿ ಜೀವನದಲ್ಲಿ ಸಾಕಷ್ಟು ಬೆಳವಣಿಗೆ, ಅಭಿವೃದ್ಧಿ ಮತ್ತು ವೈಯಕ್ತಿಕ ಸಂತೋಷ, ನೆಮ್ಮದಿ ಕಂಡುಕೊಳ್ಳುವ ಯೋಗ ನಿಮಗಿದೆ. ಜೊತೆಗೆ ನಿಮ್ಮ ಹಿಂದಿನ ತಪ್ಪುಗಳನ್ನು ಪರಾಮರ್ಶೆ ನಡೆಸಲಿದ್ದೀರಿ.

ಜೀವನದಲ್ಲಿ ಯಾವುದಾದರೂ ಸಾಧನೆ ಮಾಡಬೇಕು ಎನ್ನುವವರಿಗೆ ಇದು ಪ್ರಶಸ್ತವಾದ ಕಾಲವಾಗಿದೆ. ಅನಗತ್ಯ ವಾದ ವಿವಾದಗಳನ್ನು ಕಡಿಮೆ ಮಾಡಿದರೆ ನಿಮ್ಮ ಸಮೀಪವರ್ತಿಗಳಿಂದ ಅನುಕೂಲಗಳು ಆಗಲಿದೆ. ಆಧ್ಯಾತ್ಮದತ್ತಲೂ ಮನಸ್ಸು ವಾಲಲಿದೆ.

ಏಪ್ರಿಲ್ ನಲ್ಲಿ ಕನ್ಯಾ ರಾಶಿಯವರು ಸಾಕಷ್ಟು ಅಭಿವೃದ್ಧಿ, ಸಕಾರಾತ್ಮಕ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದ್ದಾರೆ. ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಸಾಕಷ್ಟು ಗಳಿಕೆ ಮಾಡಲಿದ್ದೀರಿ. ಆರ್ಥಿಕವಾಗಿ ಸುಧಾರಣೆಯಾಗುವ ಯೋಗ ನಿಮ್ಮದಾಗಲಿದೆ.

ಶನಿಯ ಚಲನೆಯಿಂದಾಗಿ ಈ ವರ್ಷ ನಿಮಗೆ ಸಾಕಷ್ಟು ಒಳ್ಳೆಯದೇ ಆಗುತ್ತದೆಯೇ ಹೊರತು ಕೆಡುಕಂತೂ ಆಗಲು ಸಾಧ್ಯವಿಲ್ಲ. ವೃತ್ತಿ ಜೀವನದ ಬಗ್ಗೆ ಮಹತ್ವದ ತೀರ್ಮಾನಗಳನ್ನು ಕೈಗೊಂಡು ನಿಮ್ಮ ಜೀವನ ರೂಪಿಸುವುದರ ಬಗ್ಗೆ ಗಮನ ಹರಿಸಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

Shani Dasha horoscope 2025: ಸಿಂಹ ರಾಶಿಯವರಿಗೆ 2025 ರಲ್ಲಿ ಶನಿ ದೆಶೆಯಿರುತ್ತದಾ