Select Your Language

Notifications

webdunia
webdunia
webdunia
webdunia

Shani Dasha horoscope 2025: ಸಿಂಹ ರಾಶಿಯವರಿಗೆ 2025 ರಲ್ಲಿ ಶನಿ ದೆಶೆಯಿರುತ್ತದಾ

Astrology

Krishnaveni K

ಬೆಂಗಳೂರು , ಗುರುವಾರ, 28 ನವೆಂಬರ್ 2024 (09:38 IST)
ಬೆಂಗಳೂರು: ಸಿಂಹ ರಾಶಿಯವರಿಗೆ 2025 ರಲ್ಲಿ ಶನಿ ದೆಶೆಯ ಅನುಕೂಲ ಅಥವಾ ಅನಾನುಕೂಲಗಳು ಇರುತ್ತವೆಯೇ ಎಂಬ ಅನುಮಾನಗಳಿಗೆ ಇಲ್ಲಿದೆ ಉತ್ತರ. ಸಿಂಹ ರಾಶಿಯವರ 2025 ರ ಶನಿ ದೆಸೆ ಫಲ ಇಲ್ಲಿದೆ ನೋಡಿ.

ಶನಿ ಗ್ರಹನು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಸಿಂಹ ರಾಶಿಯವರಿಗೆ ಈ ವರ್ಷ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡುಬರುವುದು. ವ್ಯವಹಾರದಲ್ಲೂ ಸಾಕಷ್ಟು ಲಾಭ ಕಂಡುಕೊಳ್ಳಲಿದ್ದಾರೆ. ಹೊಸ ಮನೆ ಕಟ್ಟುವ ಕನಸು ನನಸಾಗಲಿದೆ.

ಹಾಗಂತ ಶನಿ ದೆಸೆಯ ಕಾಟವಿರುವುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ವರ್ಷ ನಿಮಗೆ ಮಾರ್ಚ್ ಅಂತ್ಯದಿಂದ ಜೂನ್ ವರೆಗೆ ಶನಿ ದೆಸೆ ಇರಲಿದೆ. ಇದು ಸಣ್ಣ ಅವಧಿಯದ್ದಾಗಿದ್ದು, ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೇನೂ ಇಲ್ಲ. ಹೀಗಾಗಿ ನಿಮಗೆ ಈ ವರ್ಷ ಉತ್ತಮ ವರ್ಷವಾಗಿರಲಿದೆ.

ಆದರೆ ಮತ್ತೆ 2043 ರಲ್ಲಿ  ಮೂರು ವರ್ಷ ಕಠಿಣ ಶನಿ ದೆಸೆಯ ಯೋಗವಿದೆ. ಆಗ ಸಂಕಷ್ಟಗಳು ಎದುರಾದೀತು. ಆದರೆ ಈ ವರ್ಷ ನಿಮಗೆ ಶನಿ ಗ್ರಹನಿಂದ ಹೆಚ್ಚಿನ ಅನಾನುಕೂಲ ಅಥವಾ ಸಂಕಷ್ಟಗಳು ಎದುರಾಗುವ ಸಂಭವವಿಲ್ಲ. ಕಿರು ಅವಧಿಯಲ್ಲಿ ಶನಿ ದೆಸೆಯಿದ್ದು ಈ ಅವಧಿಯಲ್ಲಿ ಮಾನಸಿಕವಾಗಿ ಒತ್ತಡ, ಆತಂಕ, ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವುದು ಇತ್ಯಾದಿ ಸಣ್ಣ ಪುಟ್ಟ ಸಂಕಷ್ಟಗಳು ಎದುರಾದೀತು. ಇದಕ್ಕಾಗಿ ತಪ್ಪದೇ ಈ ಸಮಯದಲ್ಲಿ ಶನಿಗೆ ಎಳ್ಳೆಣ್ಣೆಯ ದೀಪ ಹಚ್ಚುವುದು ಮತ್ತು ಆಂಜನೇಯನ ಪ್ರಾರ್ಥನೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?