Select Your Language

Notifications

webdunia
webdunia
webdunia
webdunia

Shani Dasha horoscope 2025: ತುಲಾ ರಾಶಿಯವರಿಗೆ ಈ ವರ್ಷ ಶನಿಯಿಂದ ಲಾಭ ಯಾಕೆ

Astrology

Krishnaveni K

ಬೆಂಗಳೂರು , ಗುರುವಾರ, 28 ನವೆಂಬರ್ 2024 (09:47 IST)
ಬೆಂಗಳೂರು: ತುಲಾ ರಾಶಿಯವರಿಗೆ 2025 ರಲ್ಲಿ ಶನಿ ಗ್ರಹದಿಂದ ಯಾವ ರೀತಿಯ ಲಾಭ ಅಥವಾ ನಷ್ಟವಾಗಲಿದೆ, ಏನು ಬದಲಾವಣೆಗಳಾಗಲಿವೆ ಎಂಬುದರ ವಿವರ ಇಲ್ಲಿದೆ.

ಜ್ಯೋತಿಷ್ಯದ ಪ್ರಕಾರ ಯಾವುದೇ ಗ್ರಹವೂ ಒಂದು ಮನೆಯಿಂದ ಇನ್ನೊಂದು ಮನೆಗೆ ಚಲಿಸುವ ಸಂದರ್ಭದಲ್ಲಿ ಕೆಲವೊಂದು ರಾಶಿಯವರಿಗೆ ಸಾಕಷ್ಟು ಅನುಕೂಲಗಳಾಗುತ್ತವೆ. 2025 ರಲ್ಲಿ ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಹೀಗಾಗಿ ಕೆಲವೊಂದು ರಾಶಿಗಳಿಗೆ ಈ ವರ್ಷ ಅನುಕೂಲವಾಗುತ್ತದೆ.

ಅದರಲ್ಲಿ ತುಲಾ ರಾಶಿಯೂ ಒಂದು. ತುಲಾ ರಾಶಿಯವರು ಈ ವರ್ಷ ಶನಿಯ ಚಲನೆಯಿಂದ ಸಾಕಷ್ಟು ಲಾಭ ಪಡೆದುಕೊಳ್ಳಲಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆರನೇ ಮನೆಯಲ್ಲಿ ಶನಿ ಅನುಕೂಲ ಎಂದು ನಂಬಲಾಗುತ್ತದೆ. ಅದೇ ರೀತಿ ಈ ವರ್ಷ ತುಲಾ ರಾಶಿಯವರಿಗೆ ಶನಿಯಿಂದ ಲಾಭವಾಗಲಿದೆ.

ಈ ವರ್ಷ ತುಲಾ ರಾಶಿಯವರಿಗೆ ಕೊಂಚ ಆಲಸ್ಯತನ ಕಾಡೀತು. ಅದನ್ನು ಬದಿಗೊತ್ತಿದರೆ ಕೈ ಹಿಡಿದ ಕೆಲಸಗಳಲ್ಲಿ ಯಶಸ್ಸು ಖಂಡಿತಾ. ವರ್ಷಾಂತ್ಯದಲ್ಲಿ ಆರೋಗ್ಯದಲ್ಲಿ ಸಮಸ್ಯೆ, ಕೌಟುಂಬಿಕವಾಗಿ ಭಿನ್ನಾಭಿಪ್ರಾಯಗಳು ಕಂಡುಬಂದೀತು. ಆದರೆ ಶನಿಯ ಪ್ರಭಾವದಿಂದ ಇದು ಕೊಂಚ ಮಟ್ಟಿಗೆ ಕಡಿಮೆಯಾಗಲಿದೆ.  ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಜಯ ಸಿಗಲಿದೆ. ಹಾಗಿದ್ದರೂ ಪ್ರತೀ ಶನಿವಾರ ಎಳ್ಳೆಣ್ಣೆ ದೀಪ ಹಚ್ಚಿ ಶನಿಗೆ ಪೂಜೆ ಮಾಡುವುದರಿಂದ ಶನಿ ದೇವನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ.

Share this Story:

Follow Webdunia kannada

ಮುಂದಿನ ಸುದ್ದಿ

Shani Dasha horoscope 2025: ಕನ್ಯಾ ರಾಶಿಯವರಿಗೆ ಶನಿಯ ದೃಷ್ಟಿಯಿದೆಯೇ