ಮಕ್ಕಳಲ್ಲಿ ಭಯ ಹೋಗಲಾಡಿಸಲು ಈ ಮಂತ್ರ ಹೇಳಿಕೊಡಿ

Krishnaveni K
ಶುಕ್ರವಾರ, 29 ಮಾರ್ಚ್ 2024 (08:35 IST)
ಬೆಂಗಳೂರು: ಕೆಲವು ಮಕ್ಕಳು ವಿಪರೀತ ಭಯ ಪ್ರಕೃತಿಯವರಾಗಿರುತ್ತಾರೆ. ಅಥವಾ ಏನನ್ನೋ ನೋಡಿ ಭಯ ಪಟ್ಟುಕೊಂಡಿರುತ್ತಾರೆ. ಹಾಗಿದ್ದರೆ ಮಕ್ಕಳಲ್ಲಿ ಭಯ ಹೋಗಲಾಡಿಸಲು ಯಾವ ಶ್ಲೋಕ ಹೇಳಬೇಕು ಇಲ್ಲಿ ನೋಡಿ.

ಮಂತ್ರ, ಶ್ಲೋಕಗಳು ಕೇವಲ ದೇವರ ಧ‍್ಯಾನಕ್ಕಾಗಿ ಮಾತ್ರವಲ್ಲ, ನಮ್ಮಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬಲೂ ಸಹಕಾರಿಯಾಗುತ್ತದೆ. ಪರಮಾತ್ಮನ ಸಾನಿಧ‍್ಯವನ್ನು ನಾವು ಅನುಭವಿಸಬೇಕಾದರೆ ಮಂತ್ರ, ಶ್ಲೋಕಗಳು ಸಹಕಾರಿಯಾಗುತ್ತದೆ.

ಮಕ್ಕಳು ಯಾವುದೋ ಕೆಟ್ಟ ಕನಸು ಕಂಡು ಅಥವಾ ಇನ್ಯಾವುದೋ ಕಾರಣಗಳಿಗೆ ವಿಪರೀತ ಭಯಪಡುತ್ತಿದ್ದರೆ ಅವರಿಗೆ ಗಾಯತ್ರಿ ಮಂತ್ರ ಜಪಿಸಲು ಹೇಳಿ. ಸೂರ್ಯ ದೇವರು ನಮ್ಮಲ್ಲಿ ಶಕ್ತಿ, ಆತ್ಮವಿಶ್ವಾಸ ತುಂಬುತ್ತಾನೆ. ಈ ಕಾರಣಕ್ಕೆ ಗಾಯತ್ರಿ ಮಂತ್ರ ಜಪಿಸಿದರೆ ಉತ್ತಮ.

ಅದೇ ರೀತಿ ‘ಗುರು ಬ್ರಹ್ಮ ಗುರು ವಿಷ್ಣು’ ಎಂಬ ಗುರು ಮಂತ್ರವನ್ನು ಮಕ್ಕಳಿಗೆ ಹೇಳಿಕೊಡಿ. ಇದರಿಂದ ಅವರ ಮನಸ್ಸಿನಲ್ಲಿರುವ ಭಯ ಹೋಗುವುದಲ್ಲದೆ, ವಿದ್ಯೆಯಲ್ಲಿ ಏಕಾಗ್ರತೆ ಯಶಸ್ಸು ತಂದುಕೊಡುತ್ತದೆ. ನಮ್ಮ ವೇದಶಾಸ್ತ್ರಗಳಲ್ಲಿರುವ ಮಂತ್ರಗಳು, ಶ್ಲೋಕಗಳಿಗೆ ಅಷ್ಟು ಶಕ್ತಿಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments