Select Your Language

Notifications

webdunia
webdunia
webdunia
webdunia

Sade Sati Shani 2025: ಶನಿ ದೆಶೆಯ ಮೂರು ಚರಣಗಳು ಮತ್ತು ಅದರ ಪರಿಣಾಮಗಳು

Shani God

Krishnaveni K

ಬೆಂಗಳೂರು , ಶನಿವಾರ, 30 ನವೆಂಬರ್ 2024 (08:53 IST)
Photo Credit: X
ಬೆಂಗಳೂರು: 2025 ರಲ್ಲಿ ಶನಿ ದೆಶೆಯು ವಿಶೇಷವಾಗಿ ಮೀನ ರಾಶಿಯವರಿಗೆ ಹೆಚ್ಚು ಪರಿಣಾಮ ಬೀರಲಿದೆ. ಈ ವರ್ಷದಿಂದ ಈ ರಾಶಿಯವರಿಗೆ ಸಾಡೇ ಸಾತಿ ಶನಿ ಆರಂಭವಾಗುತ್ತದೆ. ಸಾಡೇ ಸಾತಿ ಶನಿ ಮೂರು ಚರಣಗಳಲ್ಲಿರುತ್ತದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಸಾಡೇ ಸಾತಿ ಶನಿಯ ಫಲವಿದ್ದರೆ ಜೀವನದಲ್ಲಿ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಸಾಡೇ ಸಾತಿ ಶನಿ ಮೂರು ಚರಣಗಳಲ್ಲಿದ್ದು, ಮೊದಲನೆಯ ಚರಣದಲ್ಲಿ ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಎರಡನೆಯ ಚರಣದಲ್ಲಿ ಕೌಟುಂಬಿಕ ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತವೆ.

ಮೂರನೆಯ ಚರಣ ಎಲ್ಲಕ್ಕಿಂತ ಕಠಿಣವಾಗಿರುತ್ತದೆ. ಮೊದಲ ಎರಡು ಚರಣಕ್ಕಿಂತ ಕೊನೆಯ ಚರಣದಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಸಾಕಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಮೂರನೇ ಚರಣದಲ್ಲಿ ಕುಟುಂಬದವರ ನಂಬಿಕೆ, ಸಂತೋಷ ಕಳೆದುಕೊಳ್ಳುತ್ತೀರಿ. ಈ ಸಮಯದಲ್ಲಿ ಖರ್ಚಿಗಿಂತ ಆದಾಯವೇ ಹೆಚ್ಚಾಗುತ್ತದೆ. ಶುಭ ಕಾರ್ಯಗಳಿಗೆ ಅಡ್ಡಿ ಎದುರಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಕಲಹ, ಭಿನ್ನಾಭಿಪ್ರಾಯಗಳು ಬರುತ್ತವೆ. ಮಕ್ಕಳೂ ನಿಮ್ಮ ಮಾತು ಕೇಳದವರಾಗುತ್ತಾರೆ. ಈ ಸಮಯದಲ್ಲಿ ಜೀವನದಲ್ಲಿ ಸೋತ ಅನುಭವವಾಗುವುದು.

ಕುಂಭ ರಾಶಿ: ಈ ರಾಶಿಯವರಿಗೆ  2023 ರಲ್ಲಿ ಶನಿ ದೆಶೆ ಆರಂಭವಾಗಿತ್ತು. 2025 ರಲ್ಲಿ ಶನಿ ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಹೀಗಾಗಿ ಈ ವರ್ಷ ಮಾರ್ಚ್ 29 ಕ್ಕೆ ಕುಂಭ ರಾಶಿಯವರಿಗೆ ಶನಿಯಿಂದ ಮುಕ್ತಿ.

ಮೀನ ರಾಶಿ: ಮೀನ ರಾಶಿಯವರಿಗೆ 2025 ರ ಮಾರ್ಚ್ 29 ರಿಂದ 2030 ರ ಏಪ್ರಿಲ್ ವರೆಗೆ ಶನಿ ದೆಶೆಯಿರಲಿದೆ. ಹೀಗಾಗಿ ಈ ರಾಶಿಯವರು ಶನಿಯ ಋಣಾತ್ಮಕ ಪರಿಣಾಮಗಳಾಗದಂತೆ ಶನಿ ಪೂಜೆಗಳನ್ನು ನಿಯಮಿತವಾಗಿ ಮಾಡುತ್ತಿರಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

Sade Sati Shani 2025: 2025 ರಲ್ಲಿ ಸಾಡೇಸಾತಿ ಶನಿ ಯಾರಿಗೆಲ್ಲಾ ಇದೆ ಇಲ್ಲಿದೆ ವಿವರ