Publish Date: Sat, 30 Nov 2024 (08:46 IST)
Updated Date: Sat, 30 Nov 2024 (08:51 IST)
ಬೆಂಗಳೂರು: 2025 ರಲ್ಲಿ ಯಾವೆಲ್ಲಾ ರಾಶಿಯವರಿಗೆ ಸಾಡೇಸಾತಿ ಶನಿಯ ಪ್ರಭಾವವಿರಲಿದೆ, ಯಾವೆಲ್ಲಾ ರೀತಿ ಪ್ರಭಾವವಿರಲಿದೆ ಇಲ್ಲಿದೆ ಸಂಪೂರ್ಣ ವಿವರ.
2025 ರಲ್ಲಿ ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಚಲಿಸಲಿದ್ದಾನೆ. ಈ ಸಂದರ್ಭದಲ್ಲಿ ಕೆಲವೊಂದು ರಾಶಿಯವರಿಗೆ ಶನಿ ದೆಶೆಯ ಪರಿಣಾಮ ಬೀರಬಹುದು. ಅದರಲ್ಲೂ ವಿಶೇಷವಾಗಿ ಮೀನ ರಾಶಿಯವರಿಗೆ ಈ ವರ್ಷದಿಂದ ಸಾಡೇ ಸಾತಿ ಶನಿ ದೆಶೆಯಿರುವುದು.
2025 ರಲ್ಲಿ ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಸಾಡೇ ಸಾತಿ ಶನಿಯ ಪ್ರಭಾವವಿರಲಿದೆ. ಕುಂಭ ರಾಶಿಯಿಂದ ಮೀನ ರಾಶಿಗೆ ಶನಿ ಚಲಿಸಿದ ಬಳಿಕ ಮೇಷ ರಾಶಿಯವರಿಗೂ ಸಾಡೇ ಸಾತಿ ಶನಿಯ ಪ್ರಭಾವ ಆರಂಭವಾಗಲಿದೆ.
ಮೇಷ ರಾಶಿ: ಮೇಷ ರಾಶಿಯವರಿಗೆ ಮಾರ್ಚ್ 29 ರಿಂದ 2032 ರ ಮೇ ತನಕವೂ ಸಾಡೇ ಸಾತಿ ಶನಿಯ ಪ್ರಭಾವವಿರುವುದು. ಆದರೆ ಬೃಹಸ್ಪತಿಯೂ ಜೊತೆಗಿರುವುದರಿಂದ ಶನಿಯ ಋಣಾತ್ಮಕ ಪ್ರಭಾವ ಅಷ್ಟಾಗಿ ಪರಿಣಾಮ ಬೀರದು.
ಮಕರ ರಾಶಿ: ಮಕರ ರಾಶಿಯವರಿಗೆ ಶನಿ ಕೊನೆಯ ಹಂತದಲ್ಲಿದ್ದಾನೆ. ಮಕರ ರಾಶಿಯವರಿಗೆ 2017 ರ ಜನವರಿ 26 ರಿಂದ ಶನಿಯ ಪ್ರಭಾವ ಶುರುವಾಗಿದೆ. ಆದರೆ 2025 ರ ಮಾರ್ಚ್ 29 ರಿಂದ ಈ ರಾಶಿಯವರಿಗೆ ಶನಿಯಿಂದ ಮುಕ್ತಿ ಸಿಗುವುದು.