Select Your Language

Notifications

webdunia
webdunia
webdunia
webdunia

Sade Sati Shani 2025: 2025 ರಲ್ಲಿ ಸಾಡೇ ಸಾತಿ ಶನಿ ಇರುವವರು ಈ ಪರಿಹಾರ ಮಾಡಿ

Astrology

Krishnaveni K

ಬೆಂಗಳೂರು , ಶನಿವಾರ, 30 ನವೆಂಬರ್ 2024 (09:01 IST)
ಬೆಂಗಳೂರು: 2025 ರಲ್ಲಿ ಮೀನ ರಾಶಿಯವರಿಗೆ ಸಾಡೇಸಾತಿ ಶನಿಯ ನಕಾರಾತ್ಮಕ ಪ್ರಭಾವ ಆರಂಭವಾಗಲಿದೆ. ಕುಂಭ ರಾಶಿಯವರಿಗೆ ಶನಿಯಿಂದ ಈ ವರ್ಷ ಮುಕ್ತಿ ಸಿಗುವುದು, ಮೇಷ ರಾಶಿಯವರಿಗೂ ಶನಿಯ ಪ್ರಭಾವವಿರಲಿದೆ. ಸಾಡೇಸಾತಿ ಶನಿ ಇರುವವರು ಯಾವ ಪರಿಹಾರಗಳನ್ನು ಮಾಡಬೇಕು ನೋಡಿ.

2025 ರಲ್ಲಿ ಸಾಡೇ ಸಾತಿ ರಾಶಿ ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ವರ್ಷದ ಆರಂಭದಲ್ಲಿ ಮಕರ, ಕುಂಭ ರಾಶಿಯವರಿಗೆ ಶನಿಯ ಪ್ರಭಾವವಿರುತ್ತದೆ. 2025 ರಲ್ಲಿ ಮಾರ್ಚ್ 29 ರಿಂದ ಮೀನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ವರ್ಷದಿಂದ ಸಾಡೇ ಸಾತಿ ಶನಿ ಆರಂಭವಾಗಲಿದೆ. ಮೀನ ರಾಶಿಗೆ ಶನಿ ಪ್ರವೇಶ ಮಾಡುವುದರಿಂದ ಮೇಷ ರಾಶಿಯವರಿಗೂ ಶನಿಯ ಪ್ರಭಾವವಿರುವುದು.

ಸಾಡೇಸಾತಿ ಶನಿ ದೋಷಕ್ಕೆ ಪರಿಹಾರಗಳೇನು ಇಲ್ಲಿ ನೋಡಿ:
ನಾಯಿ, ಕಾಗೆ ಮತ್ತು ಪಕ್ಷಿಗಳಿಗೆ ರೊಟ್ಟಿ ಆಹಾರವಾಗಿ ನೀಡಿ
ಅಂಧರಿಗೆ ಆಹಾರ ದಾನ ಮಾಡಿ
ಶನಿವಾರಗಳಂದು ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣಿ ದೀಪ ಹಚ್ಚಿ
ಶನಿ ಮಂದಿರಕ್ಕೆ ತೆರಳಿ ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ
11 ಶನಿವಾರಗಳಂದು ತಪ್ಪದೇ ಶನಿ ದೇವಸ್ಥಾನಕ್ಕೆ ಭೇಟಿ ನಿಡಿ
ಸ್ವಚ್ಛತಾ ಕಾರ್ಮಿಕರು, ವಿಧವೆಯರಿಗೆ ದಾನ ಧರ್ಮ ನೀಡಿ
ಹನುಮನ ಪೂಜೆ ಮಾಡುವುದು ಮತ್ತು ಹನುಮಾನ್ ಚಾಲೀಸಾ ಪಠಿಸುತ್ತಿರಿ
ಮದ್ಯಪಾನ ಮಾಡುವುದು,  ಇನ್ನೊಬ್ಬರಿಗೆ ನೋವಾಗುವಂತೆ ಮಾತನಾಡುವುದು, ಇನ್ನೊಬ್ಬರ ಹಣಕ್ಕೆ ಕಣ್ಣು ಹಾಕುವುದು ಇತ್ಯಾದಿ ಕೆಟ್ಟ ಕೆಲಸಗಳನ್ನು ಮಾಡಬೇಡಿ

Share this Story:

Follow Webdunia kannada

ಮುಂದಿನ ಸುದ್ದಿ

Sade Sati Shani 2025: ಶನಿ ದೆಶೆಯ ಮೂರು ಚರಣಗಳು ಮತ್ತು ಅದರ ಪರಿಣಾಮಗಳು