Select Your Language

Notifications

webdunia
webdunia
webdunia
webdunia

Muruga Mantra: ಸುಬ್ರಹ್ಮಣ್ಯ ದೇವರ ಮೂಲ ಮಂತ್ರ ಯಾವುದು, ಯಾಕೆ ಓದಬೇಕು

Subramanya God

Krishnaveni K

ಬೆಂಗಳೂರು , ಸೋಮವಾರ, 6 ಜನವರಿ 2025 (08:44 IST)
ಬೆಂಗಳೂರು: ಸುಬ್ರಹ್ಮಣ್ಯ ದೇವರ ಮೂಲ ಮಂತ್ರ ಅತ್ಯಂತ ಪವರ್ ಫುಲ್ ಮಂತ್ರವಾಗಿದ್ದು ಇದನ್ನು ಓದುವುದರ ಫಲವೇನು ಯಾಕೆ ಓದಬೇಕು ಇಲ್ಲಿದೆ ನೋಡಿ ವಿವರ.

ಸುಬ್ರಹ್ಮಣ್ಯ ದೇವರು ವಿಶೇಷವಾಗಿ ನಮಗೆ ಮಾನಸಿಕ ನೆಮ್ಮದಿ, ಸಂತಾನ ಸಮಸ್ಯೆಗಳು, ವಿವಾಹಾದಿ ತೊಂದರೆಗಳಿದ್ದರೆ ನಿವಾರಿಸುತ್ತಾನೆ ಎಂಬ ನಂಬಿಕೆಯಿದೆ. ಸುಬ್ರಹ್ಮಣ್ಯ ದೇವರ ಮೂಲ ಮಂತ್ರವನ್ನು ಓದುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗಿ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದಾಗಿದೆ.  ಮಾನಸಿಕ ಒತ್ತಡಗಳು ನಿವಾರಣೆಯಾಗಿ ಧೈರ್ಯ ಮೂಡುತ್ತದೆ. ಆದರೆ ಮೂಲಮಂತ್ರವನ್ನು ಓದುವಾಗ ಉಚ್ಛಾರಣೆ ತಪ್ಪಾಗದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಸುಬ್ರಹ್ಮಣ್ಯ ದೇವರ ಮೂಲ ಮಂತ್ರ ಹೀಗಿದೆ ನೋಡಿ.

ಓಂ ಶರವಣ ಭವಾಯ ನಮಃ

ಅಥವಾ
ಓಂ ಸುಬ್ರಹ್ಮಣ್ಯ ದೇವಾಯ ನಮಃ

ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಪಠಣೆ ಮಾಡಿ. ವಿಶೇಷವಾಗಿ ಸರ್ಪದೋಷದಿಂದ ಬಳಲುತ್ತಿರುವವರು, ಸಂತಾನಾಪೇಕ್ಷಿತರು, ವಿವಾಹಾದಿ ಶುಭ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದರೆ, ಕುಜ ದೋಷ ಕಾಡುತ್ತಿದ್ದರೆ ಈ ಮಂತ್ರವನ್ನು ಪಠಣೆ ಮಾಡುವುದು ಉತ್ತಮ.

ಸುಬ್ರಹ್ಮಣ್ಯ ಸ್ವಾಮಿಯ ಮೂಲ ಮಂತ್ರವನ್ನು ಪಠಿಸಲು ಇಂತಹದ್ದೇ ಸಮಯವೆಂದು ಇಲ್ಲ. ಯಾವ ಸಮಯದಲ್ಲಿ ಬೇಕಾದರೂ ಶುದ್ಧ ಮನಸ್ಸಿನಿಂದ ಪಠಣೆ ಮಾಡಬಹುದು. ಹಾಗಿದ್ದರೂ ಷಷ್ಠಿ ತಿಥಿಯಂದು, ಮಂಗಳವಾರಗಳಂದು ಪಠಣೆ ಮಾಡುವುದು ಅತ್ಯಂತ ಶ್ರೇಯಸ್ಕರವೆಂದು ನಂಬಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?