ಬೆಂಗಳೂರು: ಹೊಸ ವರ್ಷ 2025 ನಾಳೆಯಿಂದಲೇ ಶುರುವಾಗಲಿದ್ದು, ಕಳೆದ ಏಳೂವರೆ ವರ್ಷದಿಂದ ಸಾಡೇ ಸಾತಿ ಶನಿ ಪ್ರಭಾವದಿಂದ ಸಂಕಷ್ಟದಲ್ಲಿದ್ದವರಿಗೆ ಶುಭ ಸುದ್ದಿ ಸಿಗಲಿದೆ.
ಸಾಡೇ ಸಾತಿ ಶನಿ ಎಂದರೆ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ದೈಹಿಕವಾಗಿ, ಮಾನಸಿಕವಾಗಿ ಮತ್ತು ಕೌಟುಂಬಿಕವಾಗಿ ಸೋಲು, ನಷ್ಟಗಳು ಎದುರಿಸಿ ಹೈರಾಣಾಗುತ್ತಾರೆ. ಈ ವರ್ಷದಿಂದ ಈ ಕೆಲವೊಂದು ರಾಶಿಯವರಿಗೆ ಶನಿ ದೋಷದಿಂದ ಮುಕ್ತಿ ಸಿಗಲಿದ್ದು ಒಳ್ಳೆಯ ಕಾಲ ಆರಂಭವಾಗಲಿದೆ.
ಈ ವರ್ಷ ಶನಿ ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಕಳೆದ ಏಳೂವರೆ ವರ್ಷದಿಂದ ಮಕರ ಮತ್ತು ಕುಂಭ ರಾಶಿಯವರು ಶನಿ ದೋಷದ ಪ್ರಭಾವದಿಂದ ಹೈರಾಣಾಗಿದ್ದರು. ಆದರೆ 2025 ರಿಂದ ಮಕರ ರಾಶಿಯವರಿಗೆ ಶನಿಯಿಂದ ಮುಕ್ತಿ ಸಿಗುವುದು. ಹೀಗಾಗಿ ಹೊಸ ವರ್ಷದಿಂದ ನಿರಾಳವಾಗಿರಬಹುದು.
ಇಷ್ಟು ದಿನ ಆರ್ಥಿಕ ಸಮಸ್ಯೆಗಳು, ಸೋಲು ಕಂಡುಬಂದಿದ್ದರೆ ಅದೆಲ್ಲವೂ ಪರಿಹಾರವಾಗಿ ಜೀವನದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವಿದೇಶ ಪ್ರಯಾಣ, ಹೊಸ ಉದ್ಯೋಗ, ವಿವಾಹಾದಿ ಪ್ರಯತ್ನಗಳನ್ನು ಮಾಡುತ್ತಿದ್ದರೆ ಮಕರ ರಾಶಿಯವರಿಗೆ ಈ ವರ್ಷದಿಂದ ಉತ್ತಮ ಫಲಗಳು ಕಂಡುಬರಲಿವೆ. ಆದರೆ ಮೀನ ರಾಶಿಯವರಿಗೆ ಸಾಡೇ ಸಾತಿ ಶನಿ ಪ್ರಭಾವ ಆರಂಭವಾಗಲಿದ್ದು, ಕುಂಭ ರಾಶಿಯವರಿಗೆ ಸಣ್ಣ ಮಟ್ಟಿಗೆ ಪ್ರಭಾವವಿರಲಿದೆ. ಈ ರಾಶಿಯವರು ಆದಷ್ಟು ಶನಿ ಪೂಜೆ, ಸೇವೆ ಮಾಡುತ್ತಿದ್ದರೆ ತಕ್ಕ ಮಟ್ಟಿಗೆ ಋಣಾತ್ಮಕ ಪ್ರಭಾವದಿಂದ ರಕ್ಷಿಸಿಕೊಳ್ಳಬಹುದು.