ಬೆಂಗಳೂರು: ಶ್ರೀಗುರು ದತ್ತಾತ್ರೇಯರೆಂದರೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನ ಅವತಾರವೆಂದೇ ಹೇಳಲಾಗುತ್ತದೆ. ದತ್ತಾತ್ರೇಯರ ಗಾಯತ್ರಿ ಮಂತ್ರದ ಬಗ್ಗೆ ಇಂದು ತಿಳಿದುಕೊಳ್ಳೋಣ.
ಗುರು ದತ್ತಾತ್ರೇಯರನ್ನು ಪೂಜಿಸುವುದರಿಂದ ತ್ರಿಮೂರ್ತಿ ದೇವರುಗಳನ್ನು ಪೂಜಿಸಿದ ಫಲ ನಮ್ಮದಾಗುತ್ತದೆ. ಋಷಿ ಅತ್ರಿ ಮತ್ತು ಅನಸೂಯಾ ದಂಪತಿಗೆ ಜನಿಸಿದ ಮಗ ದತ್ತಾತ್ರೇಯ. ನಮ್ಮ ಮನೋಭಿಲಾಷೆಗಳನ್ನು ಈಡೇರಬೇಕಾದರೆ ದತ್ತಾತ್ರೇಯರ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು.
ದತ್ತಾತ್ರೇಯ ಗಾಯತ್ರಿ ಮಂತ್ರ ಹೀಗಿದೆ:
ಓಂ ದ್ರಾಂ ಹ್ರೀಂ ಕ್ರೋಂ
ದತ್ತಾತ್ರೇಯ ವಿದ್ಮಹೇ
ಯೋಗೀಶ್ವರಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಪಿತೃ ದೋಷಗಳು ನಮ್ಮನ್ನು ಕಾಡುತ್ತಿದ್ದರೆ ದತ್ತಾತ್ರೇಯ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ತಪ್ಪದೇ ಜಪಿಸಬೇಕು. ಈ ಮಂತ್ರವನ್ನು ಹೇಳುವುದರಿಂದ ನಮ್ಮೊಳಗಿನ ಆಧ್ಯಾತ್ಮಕ ಮನಸ್ಸು ಜಾಗೃತಗೊಳ್ಳುತ್ತದೆ. ಮನಸ್ಸು ಶಾಂತಗೊಳಿಸಿ ಏಕಾಗ್ರತೆ ಬರಬೇಕೆಂದರೆ ಈ ಮಂತ್ರವನ್ನು ಪ್ರತಿನಿತ್ಯ ತಪ್ಪದೇ ಹೇಳಿ.