ಅಯ್ಯಪ್ಪ ಸ್ವಾಮಿಯ ಪೂಜೆ ಮಾಡುವಾಗಲೆಲ್ಲಾ ಹರಿವರಾಸನಂ ಹಾಡು ಇರಲೇಬೇಕು. ಈ ಹಾಡು ಅಯ್ಯಪ್ಪ ಸ್ವಾಮಿಯ ಪವರ್ ಫುಲ್ ಹಾಡಾಗಿದೆ. ಶಬರಿಮಲೆಯಲ್ಲಿ ನಿತ್ಯವೂ ಈ ಹಾಡನ್ನು ಹಾಕಲಾಗುತ್ತದೆ. ಅಯ್ಯಪ್ಪ ಸ್ವಾಮಿಯನ್ನು ವರ್ಣಿಸುವ ಈ ಹಾಡು ಅತ್ಯಂತ ಜನಪ್ರಿಯವಾಗಿದೆ ಕೂಡಾ. ಆದರೆ ಈ ಹಾಡನ್ನು ಯಾವ ಸಮಯದಲ್ಲಿ ಹಾಡಲು ಸೂಕ್ತ ಗೊತ್ತಾ? ಶಬರಿಮಲೆ ಅಯ್ಯಪ್ಪನ ಕುರಿತಾದ ಹರಿವರಾಸನಂ ಹಾಡು ಒಂದು ರೀತಿಯಲ್ಲಿ ಅಯ್ಯಪ್ಪ ಸ್ವಾಮಿಗೆ ಜೋಗುಳ ಹಾಡಿನಂತೆ. ಹೀಗಾಗಿ ಇದನ್ನು ಸಂಜೆ ಮತ್ತೆ ಮುಂಜಾನೆ ವೇಳೆ ಹಾಡುವುದು ಅತ್ಯಂತ ಸೂಕ್ತವಾಗಿದೆ. ಸಂಪೂರ್ಣ ಹಾಡು ಇಲ್ಲಿದೆ ನೋಡಿ.
ಹರಿವರಾಸನಂ ವಿಶ್ವಮೋಹನಮ್
ಹರಿದಧೀಶ್ವರಂ ಆರಾಧ್ಯಪಾದುಕಮ್ |
ಅರಿವಿಮರ್ದನಂ ನಿತ್ಯನರ್ತನಮ್
ಹರಿಹರಾತ್ಮಜಂ ದೇವಮಾಶ್ರಯೇ || 1 ||
ಶರಣಕೀರ್ತನಂ ಭಕ್ತಮಾನಸಮ್
ಭರಣಲೋಲುಪಂ ನರ್ತನಾಲಸಮ್ |
ಅರುಣಭಾಸುರಂ ಭೂತನಾಯಕಮ್
ಹರಿಹರಾತ್ಮಜಂ ದೇವಮಾಶ್ರಯೇ || 2 ||
ಪ್ರಣಯಸತ್ಯಕಂ ಪ್ರಾಣನಾಯಕಮ್
ಪ್ರಣತಕಲ್ಪಕಂ ಸುಪ್ರಭಾಂಚಿತಮ್ |
ಪ್ರಣವಮಂದಿರಂ ಕೀರ್ತನಪ್ರಿಯಮ್
ಹರಿಹರಾತ್ಮಜಂ ದೇವಮಾಶ್ರಯೇ || 3 ||
ತುರಗವಾಹನಂ ಸುಂದರಾನನಮ್
ವರಗದಾಯುಧಂ ವೇದವರ್ಣಿತಮ್ |
ಗುರುಕೃಪಾಕರಂ ಕೀರ್ತನಪ್ರಿಯಮ್
ಹರಿಹರಾತ್ಮಜಂ ದೇವಮಾಶ್ರಯೇ || 4 ||
ತ್ರಿಭುವನಾರ್ಚಿತಂ ದೇವತಾತ್ಮಕಮ್
ತ್ರಿನಯನಪ್ರಭುಂ ದಿವ್ಯದೇಶಿಕಮ್ |
ತ್ರಿದಶಪೂಜಿತಂ ಚಿಂತಿತಪ್ರದಮ್
ಹರಿಹರಾತ್ಮಜಂ ದೇವಮಾಶ್ರಯೇ || 5 ||
ಭವಭಯಾಪಹಂ ಭಾವುಕಾವಕಮ್
ಭುವನಮೋಹನಂ ಭೂತಿಭೂಷಣಮ್ |
ಧವಳವಾಹನಂ ದಿವ್ಯವಾರಣಮ್
ಹರಿಹರಾತ್ಮಜಂ ದೇವಮಾಶ್ರಯೇ || 6 ||
ಕಳಮೃದುಸ್ಮಿತಂ ಸುಂದರಾನನಮ್
ಕಳಭಕೋಮಲಂ ಗಾತ್ರಮೋಹನಮ್ |
ಕಳಭಕೇಸರೀವಾಜಿವಾಹನಮ್
ಹರಿಹರಾತ್ಮಜಂ ದೇವಮಾಶ್ರಯೇ || 7 ||
ಶ್ರಿತಜನಪ್ರಿಯಂ ಚಿಂತಿತಪ್ರದಮ್
ಶ್ರುತಿವಿಭೂಷಣಂ ಸಾಧುಜೀವನಮ್ |
ಶ್ರುತಿಮನೋಹರಂ ಗೀತಲಾಲಸಮ್
ಹರಿಹರಾತ್ಮಜಂ ದೇವಮಾಶ್ರಯೇ || 8 ||
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ |
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ||