ಬೆಂಗಳೂರು: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದನ್ನು ನಿಭಾಯಿಸಲು ದೇವರ ಅನುಗ್ರಹ ಬೇಕು. ದೇವರ ಅನುಗ್ರಹಕ್ಕಾಗಿ ದುರ್ಗಾ ದೇವಿಯ ಈ ಮಂತ್ರವನ್ನು ಪ್ರತಿನಿತ್ಯ ತಪ್ಪದೇ ಪಠಿಸುವುದನ್ನು ರೂಢಿಸಿಕೊಳ್ಳಿ.
ಮನುಷ್ಯ ಎಂದ ಮೇಲೆ ಕಷ್ಟಗಳು ಬರುವುದು ಸಾಮಾನ್ಯ. ಆದರೆ ಅದನ್ನು ಎದುರಿಸಲು ನಮಗೆ ಬುದ್ಧಿ, ಸಾಮರ್ಥ್ಯವೂ ಬೇಕು. ಜೊತೆಗೆ ಧೈರ್ಯ, ಮಾರ್ಗಗಳೂ ಬೇಕು. ಇದೆಲ್ಲವೂ ಬೇಕೆಂದರೆ ನಾವು ದುರ್ಗಾ ದೇವಿಯನ್ನು ಒಲಿಸಬೇಕು. ಯಾಕೆಂದರೆ ದುರ್ಗಾ ದೇವಿ ಬುದ್ಧಿ ಶಕ್ತಿ, ಧೈರ್ಯ, ಸಾಹಸ, ಸಂಕಷ್ಟ ನಿವಾರಣೆಯ ಪ್ರತಿರೂಪವಾಗಿದ್ದಾಳೆ.
ಕಷ್ಟ ನಿವಾರಣೆಗೆ ದುರ್ಗಾದೇವಿ ಮಂತ್ರ:
ಯಾ ದೇವಿ ಸರ್ವ ಭೂತೇಷು, ಶಾಂತಿ ರೂಪೇಣ ಸಂಗ್ಸ್ತಿತ
ಯಾ ದೇವಿ ಸರ್ವ ಭೂತೇಷು, ಶಕ್ತಿ ರೂಪೇಣ ಸಂಗ್ಸ್ತಿತ
ಯಾ ದೇವಿ ಸರ್ವ ಭೂತೇಷು, ಮಾತ್ರಿ ರೂಪೇಣ ಸಂಗ್ಸ್ತಿತ
ಯಾ ದೇವಿ ಸರ್ವ ಭೂತೇಷು, ಬುದ್ಧಿ ರೂಪೇಣ ಸಂಗ್ಸ್ತಿತ
ನಮಸ್ತಸೈ, ನಮಸ್ತಸೈ, ನಮಸ್ತಸೈ, ನಮೋ ನಮಃ
ಈ ಮಂತ್ರದ ಮೂಲಕ ದೇವಿಯನ್ನು ಶಾಂತಿ, ಶಕ್ತಿ, ಮಾತೃ, ಬುದ್ಧಿ ಸ್ವರೂಪಿಣಿಯಾಗಿ ಪೂಜಿಸಿ ನಮಗೂ ಆ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ನೀಡು ಎಂದು ಪ್ರಾರ್ಥಿಸಿದಂತಾಗುತ್ತದೆ. ವಿಶೇಷವಾಗಿ ಮಂಗಳವಾರಗಳಂದು ದುರ್ಗಾ ದೇವಿಯ ಆರಾಧನೆ ಮಾಡಿದರೆ ಒಳಿತಾಗುತ್ತದೆ.