ಬೆಂಗಳೂರು: ಶನಿವಾರವಾದ ಇಂದು ಶನಿದೇವರನ್ನು ಕುರಿತಾದ ಶನಿ ಗಾಯತ್ರಿ ಮಂತ್ರವನ್ನು ತಪ್ಪದೇ ಪಠಿಸಿ. ಇದನ್ನು ಓದುವುದರಿಂದ ಏನು ಫಲ ನೋಡಿ.
ಶನಿ ದೋಷವಿದ್ದರೂ ಶನಿವಾರದಂದು ವಿಶೇಷವಾಗಿ ಶನಿಗೆ ಸಂಬಂಧಿಸಿದ ಸೇವೆ ಮಾಡುವುದರಿಂದ ಕಷ್ಟಪರಿಹಾರವಾಗುತ್ತದೆ. ಎಲ್ಲಾ ದೇವರಿಗೂ ಇರುವಂತೆ ಶನಿ ದೇವರಿಗೂ ಗಾಯತ್ರಿ ಮಂತ್ರವಿದೆ. ಇದನ್ನು ತಪ್ಪದೇ 108 ಬಾರಿ ಪಠಣ ಮಾಡಿ. ಶನಿ ಗಾಯತ್ರಿ ಮಂತ್ರ ಹೀಗಿದೆ ನೋಡಿ:
ಓಂ ಕಾಕಧ್ವಜಾಯ ವಿದ್ಮಹೇ ಖಡ್ಗಹಸ್ತಾಯ ಧೀಮಹಿ
ತನ್ನೋ ಮಂದಃಪ್ರಚೋದಯಾತ್
ಶನಿ ದೋಷವಿರುವವರು ಈ ಮಂತ್ರವನ್ನು ತಪ್ಪದೇ 108 ಬಾರಿ ಜಪಿಸಿ. ಇದರಿಂದ ಶನಿದೋಷ ನಿವಾರಣೆಯಾಗುವುದಲ್ಲದೆ, ಶನಿಯ ಕೃಪೆಗೆ ಪಾತ್ರರಾಗುವಿರಿ. ಜೀವನದಲ್ಲಿ ಕಷ್ಟ-ನಷ್ಟಗಳಾಗುತ್ತಿದ್ದರೆ ಈ ಮಂತ್ರವನ್ನು ಪಠಿಸಬೇಕು. ಜೀವನದಲ್ಲಿ ಅದೃಷ್ಟ ನಿಮ್ಮದಾಗಬೇಕು ಎಂದರೆ ಈ ಮಂತ್ರವನ್ನು ತಪ್ಪದೇ ಪಠಿಸಿ. ಅಲ್ಲದೆ ಶನಿದೇವನ ವಕ್ರದೃಷ್ಟಿಯಿಂದ ಆಗುವ ಋಣಾತ್ಮಕ ಪ್ರಭಾವಗಳು ಕಡಿಮೆಯಾಗಲು ಈ ಮಂತ್ರವನ್ನು ಪಠಿಸುವುದು ಉತ್ತಮ.