Publish Date: Wed, 02 Dec 2020 (06:21 IST)
Updated Date: Wed, 02 Dec 2020 (06:23 IST)
ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ ವಿಭಿನ್ನ ಬಣ್ಣಗಳನ್ನು ಸರಿಯಾದ ಕಡೆಗೆ ಜೋಡಿಸಿದರೆ ಅದರ ಒಳ್ಳೆಯ ಪರಿಣಾಮದಿಂದ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಹಾಗಾದ್ರೆ ಹಳದಿ ಬಣ್ಣವನ್ನು ಮನೆಯ ಯಾವ ದಿಕ್ಕಿನಲ್ಲಿ ಜೋಡಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಮನೆಯಲ್ಲಿ ಹೆಚ್ಚಿನ ವಸ್ತುಗಳು ಹಳದಿ ಬಣ್ಣದಲ್ಲಿರುತ್ತದೆ. ಮನೆಯಲ್ಲಿ ಹಳದಿ ಬಣ್ಣವನ್ನು ನೈರುತ್ಯ ದಿಕ್ಕಿನಲ್ಲಿಟ್ಟರೆ ಉತ್ತಮ. ಇದರಿಂದ ತಾಯಿಯ ಆರೋಗ್ಯ ಉತ್ತಮವಾಗಿರುತ್ತದೆ. ಮನೆಯ ಸದಸ್ಯರ ಹೊಟ್ಟೆಯ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ಹಳದಿ ಬಣ್ಣಕ್ಕೆ ಸಂಬಂಧಿಸಿದ ಯಾವುದೇ ವಸ್ತುವನ್ನು ಕೂಡ ಈ ದಿಕ್ಕಿನಲ್ಲಿಯೇ ಇಡಲು ಮರೆಯಬೇಡಿ.