ಬೆಂಗಳೂರು : ಮಹಾಲಿಂಗಪುರದ ಪುರಸಭೆ ಸದಸ್ಯೆ ಚಾಂದಿನಿ ಗರ್ಭಪಾತ ಕೇಸ್ ಗೆ ಸಂಬಂಧಿಸಿದಂತೆ ಡಿ. 5ಕ್ಕೆ ಕಾಂಗ್ರೆಸ್ ಪ್ರತಿಭಟನೆಗೆ ನಿರ್ಧಾರ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ನಾಯಕಿ ಉಮಾಶ್ರೀ ನೇತೃತ್ವದಲ್ಲಿ ಮಹಾಲಿಂಗಪುರದಲ್ಲಿ ಇಂದು ಕಾಂಗ್ರೆಸ್ ಸಭೆ ನಡೆಸಲಿದ್ದು, ಬಳಿಕ ಚಾಂದಿನಿ ಮನೆಗೆ ಉಮಾಶ್ರೀ ಅವರು ತೆರಳಲಿದ್ದಾರೆ ಎನ್ನಲಾಗಿದೆ.