ಕೆಲವೊಮ್ಮೆ ಯಾವುದೋ ಕಾರಣಕ್ಕೆ ತುಂಬಾ ಭಯಭೀತರಾಗುತ್ತೇವೆ. ಇಂತಹ ಸಂದರ್ಭದಲ್ಲಿ ಆತ್ಮಶಕ್ತಿ ಪಡೆಯಲು ಕೆಲವೊಂದು ಮಂತ್ರ ಪಠಿಸುವುದು ಸಹಕಾರಿಯಾಗಿದೆ.
ಯಾವುದೋ ದುಸ್ವಪ್ನ ಕಂಡು, ಮಾನಸಿಕವಾಗಿ ಅಧೈರ್ಯವಾದಾಗ, ಕತ್ತಲಿನಲ್ಲಿ ಓಡಾಡುವ ಸಂದರ್ಭ ಬಂದಾಗ ಒಂದು ರೀತಿಯ ಭಯ ಕಾಡುತ್ತದೆ. ಭಯ ಎನ್ನುವುದು ಮನಸ್ಸಿನ ಭಾವನೆಯಾಗಿರುತ್ತದೆ. ಇದನ್ನು ಹೋಗಲಾಡಿಸಬೇಕೆಂದರೆ ಯಾವುದೋ ಒಂದು ಆತ್ಮಶಕ್ತಿ ನಮಗೆ ಬೇಕಾಗುತ್ತದೆ.
ಮನಸ್ಸಿಗೆ ಭಯವಾಗುತ್ತಿದ್ದಾಗ ಈ ಕೆಲವು ಮಂತ್ರಗಳನ್ನು ತಪ್ಪದೇ ಪದೇ ಪದೇ ಹೇಳುತ್ತಿರಿ. ಇದರಿಂದ ಮಾನಸಿಕ ಸ್ಥೈರ್ಯ ಮೂಡುತ್ತದೆ.
ಹನುಮಾನ್ ಮಂತ್ರ: ಓಂ ಹನುಮತೇ ನಮಃ
ಶಿವ ಮಂತ್ರ: ಓಂ ನಮೋ ಭಗವತೇ ರುದ್ರಾಯ
ಗಾಯತ್ರಿ ಮಂತ್ರ: ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನಃ ಪ್ರಚೋದಯಾತ್