ಬೆಂಗಳೂರು: ಗುರುವಾರ ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದ್ದು ಈ ದಿನ ಸಾಲಿಗ್ರಾಮ ಮಂತ್ರ ಹೇಳಿ ಮಹಾವಿಷ್ಣುವಿನ ಪೂಜೆ ಮಾಡಿದರೆ ಹಲವು ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.
ಸಾಲಿಗ್ರಾಮ ರೂಪದಲ್ಲಿ ಮಹಾವಿಷ್ಣುವನ್ನು ಪೂಜಿಸಿದರೆ ಯಮ ದೂತರೂ ನಮ್ಮ ಬಳಿಗೆ ಬರಲು ಹಿಂಜರಿಯುವರಂತೆ. ಸಾಲಿಗ್ರಾಮವನ್ನು ಪೂಜೆ ಮಾಡುವುದರಿಂದ ಅಕಾಲ ಮೃತ್ಯು ಭಯ, ರೋಗ ಭಯ ನಾಶವಾಗುವುದು. ಸಾವಿನ ನಂತರ ಮೋಕ್ಷ ಪ್ರಾಪ್ತಿಯಾಗುವುದು ಎಂಬ ನಂಬಿಕೆಯಿದೆ. ಸಾಲಿಗ್ರಾಮಕ್ಕೆ ತುಳಸಿ ಎಲೆಯಿಟ್ಟು ಅಭಿಷೇಕ ಮಾಡಿ ಪೂಜೆ ಮಾಡಿದರೆ ಜೀವನದಲ್ಲಿ ಸಕಲ ಸಂಪತ್ತು, ಸಮೃದ್ಧಿ ನಿಮ್ಮದಾಗುತ್ತದೆ.
ಸಾಲಿಗ್ರಾಮಕ್ಕೆ ಪೂಜೆ ಮಾಡುವಾಗ ಈ ಮಂತ್ರವನ್ನು ಪಠಿಸಿ.
ಓಂ ಶ್ರೀ ಬಾಲಗೋಪಾಲಾಯ ನಮಃ
ಓಂ ಶ್ರೀ ದಾಮೋದರಾಯ ನಮಃ
ಓಂ ಶ್ರೀ ಕೇಶವಾಯ ನಮಃ
ಓಂ ಶ್ರೀ ಅನಂತಾಯ ನಮಃ
ಓಂ ಶ್ರೀ ಮಾಧವ್ಯ ನಮಃ
ಓಂ ಶ್ರೀ ಗಂದಕಿ ನಾಯಕಾಯ ನಮಃ
ಓಂ ನಮೋ ನಾರಾಯಣಾಯ ನಮಃ
ಓಂ ನಮೋ ವಾಗ್ವತೇ ಬಸುದೇವಾಯ ನಮಃ
ಓಂ ಶ್ರೀ ಮುಕ್ತ ಚಿತ್ರ ಗೋವಿಂದಾಯ ನಮಃ
ಓಂ ಶ್ರೀ ಸಾಲಿಗ್ರಾಮ ಶಿಲಾ ರೂಪಾಯ ನಮಃ
ಓಂ ಶ್ರೀ ಶಿವ ಸ್ತುತಾಯ ನಮಃ
ಓಂ ಶ್ರೀ ಕೇಶವಾಯ ನಮಃ
ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ.