ಬೆಂಗಳೂರು: ಆಂಜನೇಯ ಸ್ವಾಮಿಯು ವಿದ್ಯೆ, ಬುದ್ಧಿ ಜೊತೆಗೆ ಉದ್ಯೋಗದ ವಿಚಾರದಲ್ಲೂ ಅನುಗ್ರಹಿಸುತ್ತಾನೆ. ಉದ್ಯೋಗ ಪ್ರಾಪ್ತಿಗಾಗಿ ಹನುಮಂತನ ಈ ಮಂತ್ರವನ್ನು ತಪ್ಪದೇ ಜಪಿಸಿ.
ಇಂದು ಶನಿವಾರವಾಗಿದ್ದು ಆಂಜನೇಯ ಸ್ವಾಮಿಗೆ ವಿಶೇಷವಾದ ದಿನವಾಗಿದೆ. ಈ ದಿನ ಆಂಜನೇಯನ ಪೂಜೆ, ಧ್ಯಾನ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುವುದಲ್ಲದೆ, ಉದ್ಯೋಗ, ವಿದ್ಯಾಭ್ಯಾಸದಲ್ಲೂ ಪ್ರಗತಿ ಕಂಡುಬರುವುದು.
ಹನುಮಂತನು ಅಪಾರ ಬುದ್ಧಿವಂತನಾಗಿದ್ದು, ನಮ್ಮ ಜೀವನದಲ್ಲಿ ಯಶಸ್ಸಿಗೂ ಆತನ ಅನುಗ್ರಹ ಮುಖ್ಯ. ವಿಶೇಷವಾಗಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಆಂಜನೇಯ ಸ್ವಾಮಿಯ ಪೂಜೆ ಮಾಡುವುದರಿಂದ ಫಲ ಸಿಗುತ್ತದೆ.
ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ
ಈ ಮಂತ್ರವನ್ನು ಶನಿವಾರಗಳಂದು ಮಾತ್ರವಲ್ಲದೆ, ಪ್ರತಿನಿತ್ಯವೂ ಬೆಳಿಗ್ಗೆ ದೇವರ ಪೂಜೆ ವೇಳೆ 11 ಬಾರಿ ಜಪ ಮಾಡುವುದರಿಂದ ನಿಮ್ಮ ಉದ್ಯೋಗ ಸಂಬಂಧವಾದ ಎಲ್ಲಾ ರೀತಿಯ ಅಡೆತಡೆಗಳೂ ನಿವಾರಣೆಯಾಗುತ್ತದೆ.