Select Your Language

Notifications

webdunia
webdunia
webdunia
webdunia

ಮಹಾವಿಷ್ಣು ಮಂಗಳ ಮಂತ್ರ ಮತ್ತು ಇದನ್ನು ಓದುವುದರ ಫಲ

Astrology

Krishnaveni K

ಬೆಂಗಳೂರು , ಗುರುವಾರ, 13 ಫೆಬ್ರವರಿ 2025 (08:45 IST)
ಬೆಂಗಳೂರು: ಇಂದು ಗುರುವಾರವಾಗಿದ್ದು ಶ್ರೀ ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಮಹಾವಿಷ್ಣುವಿನ ಮಂಗಳ ಮಂತ್ರ ಮತ್ತು ಅದರ ಫಲವನ್ನು ತಿಳಿದುಕೊಳ್ಳೋಣ.

ಮಹಾವಿಷ್ಣು ಲೋಕ ರಕ್ಷಕ, ಸಕಲ ಸಂಕಷ್ಟಗಳ ಪರಿಹಾರ ಮಾಡುವವನು ಎಂಬ ನಂಬಿಕೆಯಿದೆ. ತಂದೆಯಂತೆ ಲೋಕವನ್ನು ಸಲಹುವವನು ಮಹಾವಿಷ್ಣು. ಭಕ್ತರ ಕಷ್ಟಗಳನ್ನು ನಿವಾರಿಸಲು ನಾನಾ ಅವತಾರಗಳನ್ನು ಎತ್ತಿ ಬಂದವನು.

ಮಹಾವಿಷ್ಣುವನ್ನು ಯಾವುದೇ ಶುಭ ಕಾರ್ಯಗಳ ಸಂದರ್ಭದಲ್ಲಿ ಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಅನೇಕ ಮಂತ್ರಗಳಲ್ಲಿ ಮಂಗಳ ಮಂತ್ರವೂ ಒಂದು. ಹೆಸರೇ ಹೇಳುವಂತೆ ಇದು ಮಂಗಳಕರ ಮಂತ್ರವಾಗಿದ್ದು, ಅದು ಇಲ್ಲಿದೆ.

ಮಂಗಳಂ ಭಗವಾನ್ ವಿಷ್ಣುಂ, ಮಂಗಳಂ ಗರುಡಾಧ್ವಜಾ
ಮಂಗಳಂ ಪುಂಡರೀಕಾಕ್ಷ, ಮಂಗಳಂ ತನ್ನೋಂ ಹರಿಹೀ

ಈ ಮಂತ್ರವನ್ನು ಯಾವುದೇ ಶುಭ ಕಾರ್ಯಗಳ ಮುನ್ನ ಹೇಳಿಕೊಂಡು ಮುಂದುವರಿದರೆ ಅಂದುಕೊಂಡ ಕೆಲಸ ಸುಗಮವಾಗುತ್ತದೆ. ವಿಶೇಷವಾಗಿ ಮನೆಯಲ್ಲಿ ಯಾವುದೇ ಮಂಗಲ ಕಾರ್ಯ ಮಾಡುವ ಮೊದಲು ಈ ಮಂತ್ರವನ್ನು ಹೇಳಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ, ಶಾಂತಿ, ಸಂತೋಷ ನೆಲೆಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?