Select Your Language

Notifications

webdunia
webdunia
webdunia
webdunia

ಆತಂಕ ದೂರ ಮಾಡಿ ಮನಸ್ಸು ಶಾಂತಗೊಳಿಸುವ ದೇವಿ ಮಂತ್ರ

Durga Devi

Krishnaveni K

ಬೆಂಗಳೂರು , ಬುಧವಾರ, 5 ಫೆಬ್ರವರಿ 2025 (08:42 IST)
Photo Credit: X
ಬೆಂಗಳೂರು: ಇಂದಿನ ಒತ್ತಡದ ಜೀವನದಲ್ಲಿ ಮನಸ್ಸು ಆತಂಕ, ಭಯದಿಂದ ಬಳಲುತ್ತಿದ್ದರೆ ಶಾಂತಗೊಳಿಸಲು ದೇವಿ ಮಂತ್ರವನ್ನು ತಪ್ಪದೇ ಜಪಿಸಬೇಕು.

ದೇವಿಯು ತಾಯಿಯ ಸ್ವರೂಪ. ದುರ್ಗಾ ದೇವಿಯು ಶಕ್ತಿ, ಚೈತನ್ಯ, ಧೈರ್ಯದ ಜೊತೆಗೆ ನಮ್ಮನ್ನು ಅಮ್ಮನಾಗಿ ಸಲಹುತ್ತಾಳೆ. ದೇವಿಯ ಕುರಿತು ಮಂತ್ರಗಳನ್ನು ಪಠಿಸುವುದರಿಂದ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗುತ್ತದೆ.

ಕೆಲವರು ಕಾರಣವಿಲ್ಲದೇ ಆತಂಕ, ಒತ್ತಡಗಳಿಂದ ಬಳಲುತ್ತಿರುತ್ತಾರೆ. ಶತ್ರು ಭಯ, ವೈಫಲ್ಯದ ಭಯ ಹೀಗೆ ಏನೋ ಚಿಂತೆ ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಮನಸ್ಸು ಶಾಂತಗೊಳಿಸಲು ದುರ್ಗಾದೇವಿಯ ಈ ಮಂತ್ರವನ್ನು ಜಪಿಸುವುದು ಉತ್ತಮ.

ಓಂ ಸರ್ವ ಸ್ವರೂಪೆ ಸರ್ವೇಶೆ, ಸರ್ವಶಕ್ತಿ ಸಮನ್ವಿತೆ
ಭಯೇ ಭಯಸ್ತ್ರಾಹಿ ನೋ ದೇವಿ, ದುರ್ಗೇ ದೇವಿ ನಮೋಸ್ತುತೆ

ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಈ ಮಂತ್ರವನ್ನು ಪ್ರತಿನಿತ್ಯ ತಪ್ಪದೇ ಜಪಿಸುವುದು ಉತ್ತಮ. ಭಯವನ್ನು ನಾಶ ಮಾಡುವ ದೇವಿಯೇ ನಿನಗೆ ನನ್ನ ನಮಸ್ಕಾರಗಳು ಎಂಬುದು ಇದರ ಅರ್ಥವಾಗಿದೆ. ಇದನ್ನು ಓದುವುದರಿಂದ ಮನಸ್ಸಿನ ಉದ್ವೇಗಗಳು ಕಡಿಮೆಯಾಗಿ ಶಾಂತಚಿತ್ತರಾಗುತ್ತೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?