Select Your Language

Notifications

webdunia
webdunia
webdunia
webdunia

ಮನೆಯ ಈ ಭಾಗದಲ್ಲಿ ಪಪ್ಪಾಯ ಗಿಡ ನೆಡಬಾರದು ಯಾಕೆ ನೋಡಿ

Pappaya Tree

Krishnaveni K

ಬೆಂಗಳೂರು , ಶುಕ್ರವಾರ, 31 ಜನವರಿ 2025 (08:40 IST)
ಬೆಂಗಳೂರು: ವಾಸ್ತು ಪ್ರಕಾರ ಮನೆಯ ಈ ಭಾಗದಲ್ಲಿ ಪಪ್ಪಾಯ ಗಿಡ ನೆಡುವುದು ಅಷ್ಟೊಂದು ಶುಭವಲ್ಲ. ಯಾಕೆ ಮತ್ತು ಯಾವ ಭಾಗದಲ್ಲಿ ಪಪ್ಪಾಯ ಗಿಡವಿರಬೇಕು ಇಲ್ಲಿದೆ ವಿವರ.

ಅನೇಕರಿಗೆ ಮನೆಯ ಮುಂಭಾಗ ಕೈತೋಟ ಮಾಡುವ ಅಭ್ಯಾಸವಿರುತ್ತದೆ. ಸಾಮಾನ್ಯವಾಗಿ ಪಪ್ಪಾಯ ಸುಲಭವಾಗಿ ಬೆಳೆಯುವ ಗಿಡವಾಗಿರುವುದರಿಂದ ಇದನ್ನು ಎಲ್ಲರ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಪಪ್ಪಾಯವನ್ನು ಯಾವುದೇ ಕಾರಣಕ್ಕೂ ಮನೆಯ ಮುಂಭಾಗದಲ್ಲಿ ನೆಡಬೇಡಿ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂಭಾಗ ಪಪ್ಪಾಯ ಗಿಡ ನೆಟ್ಟರೆ ಹಣಕಾಸಿನ ಸಮಸ್ಯೆಗಳು ತಪ್ಪಲ್ಲ ಎನ್ನಲಾಗುತ್ತದೆ. ಅಲ್ಲದೆ ಮನೆಯ ಸದಸ್ಯರ ನಡುವೆ ಸದಾ ಕಲಾಹ, ಅಶಾಂತಿ ತುಂಬಿರುತ್ತದೆ ಎಂದು ವಾಸ್ತು ಹೇಳುತ್ತದೆ.

ಪಪ್ಪಾಯಿ ಮರವನ್ನು ಪೂರ್ವಜರ ವಾಸಸ್ಥಳವೆಂದು ಹೇಳಲಾಗುತ್ತದೆ. ಇದನ್ನು ಮನೆಯ ಮುಂಭಾಗ ನೆಡುವುದರಿಂದ ಮಕ್ಕಳಿಗೂ ಪದೇ ಪದೇ ಆರೋಗ್ಯ ಸಮಸ್ಯೆ ಕಂಡುಬರುತ್ತದೆ. ಅಲ್ಲದೆ, ಇದನ್ನು ಮನೆಯಿಂದಲೂ ಎತ್ತರಕ್ಕೆ ಬೆಳೆಯಲು ಬಿಡಬಾರದು. ಅದೂ ಕೂಡಾ ಶುಭವಲ್ಲ. ಮನೆಯಿಂದ ದೂರದ ಹಿತ್ತಲಿನಲ್ಲಿ ಪಪ್ಪಾಯ ಗಿಡವನ್ನು ನೆಟ್ಟರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?