Select Your Language

Notifications

webdunia
webdunia
webdunia
webdunia

ಭಾನುವಾರ ಸೂರ್ಯನ ಈ ಸ್ತೋತ್ರವನ್ನು ತಪ್ಪದೇ ಓದಿ

Surya God

Krishnaveni K

ಬೆಂಗಳೂರು , ಭಾನುವಾರ, 2 ಫೆಬ್ರವರಿ 2025 (08:54 IST)

ಭಾನುವಾರ ಸೂರ್ಯ ಭಗವಾನ್ ಗೆ ಮೀಸಲಾದ ದಿನ. ಹಿಂದೂ ಧರ್ಮದಲ್ಲಿ ಸೂರ್ಯ ದೇವರಿಗೆ ವಿಶೇಷ ಸ್ಥಾನವಿದೆ. ಜಗತ್ತಿಗೆಲ್ಲಾ ಬೆಳಕು ಕೊಡುವವನು, ಚೈತನ್ಯ ಕೊಡುವವನು ಆ ಸೂರ್ಯ. ಹೀಗಾಗಿ ಪ್ರತಿನಿತ್ಯ ನಮ್ಮ ದಿನವನ್ನು ಸೂರ್ಯ ದೇವನಿಗೆ ನಮಸ್ಕರಿಸಿ ಆರಂಭಿಸಿದರೆ ಉತ್ತಮ. ಅದರಲ್ಲೂ ವಿಶೇಷವಾಗಿ ಭಾನುವಾರಗಳಂದು ಸೂರ್ಯ ದಿವ್ಯ ಕವಚವನ್ನು ತಪ್ಪದೇ ಓದಿ. ಇಲ್ಲಿದೆ ಸ್ತೋತ್ರ.

ಶ್ರೀ ಸೂರ್ಯ ಕವಚ ಸ್ತೋತ್ರಮ್

ಶ್ರೀ ಯಾಜ್ಞವಲ್ಕ್ಯ ಉವಾಚ

ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಂ |
ಶರೀರಾರೋಗ್ಯದಿಂ ದಿವ್ಯಂ ಸರ್ವ ಸೌಭಾಗ್ಯ ದಾಯಕಮ್ || 1 ||

ದೇದೀಪ್ಯಮಾನ ಮುಕುಟಂ ಸ್ಫುರನ್ಮಕರಕುಂಡಲಂ ||
ಧ್ಯಾತ್ವಾ ಸಹಸ್ರ ಕಿರಣಂ ಸ್ತೋತ್ರಮೇತದುದೀರಯೇತ್ || 2 ||

ಶಿರೋ ಮೇ ಭಾಸ್ಕರಃ ಪಾತು ಲಲಾಟಂಮೇ ಮಿತದ್ಯುತಿಃ |
ನೇತ್ರೇ ದಿನಮಣಿಃ ಪಾತು ಶ್ರವಣೇ ವಾಸರೇಸ್ವರಃ || 3 ||

ಘ್ರಾಣಂ ಘರ್ಮಘೃಣಿಃ ಪಾತು ವದನಂ ವೇದವಾಹನಃ |
ಜಿಹ್ವಾಂ ಮೇ ಮಾನದಃ ಪಾತು ಕಂಠಂ ಮೇ ಸುರವಂದಿತಃ || 4 ||

ಸ್ತನೌ ಪ್ರಭಾಕರಃ ಪಾತು ವಕ್ಷಃ ಪಾತು ಜನಪ್ರಿಯಃ |
ಪಾತು ಪಾದೌ ದ್ವಾದಶಾತ್ಮ ಸರ್ವಾಜ್ಞ್ಗಂ ಸಕಲೇಶ್ವರಃ || 5 ||

ಸೂರ್ಯ ರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೊರ್ಜಪತ್ರಕೇ |
ದದಾತಿ ಯಃ ಕರೇತಸ್ಯ ವಶಗಾಃ ಸರ್ವ ಸಿದ್ಧಯಃ || 6 ||

ಸುಸ್ಮಾತೋ ಯೋ ಜಪೇತ್ಸಮ್ಯ ಗ್ಯೋಧೀತೇ ಸ್ವಸ್ಥಮಾನಸಃ |
ಸರೋಗಮುಕ್ತೋ ದೀರ್ಘಾಯು
ಸುಖಂ ಪುಷ್ಟಿಂ ವಿಂದತಿ || 7 ||

|| ಇತಿ ಶ್ರೀ ಯಾಜ್ಞವಲ್ಕ್ಯ ಮುನಿ ವಿರಚಿತಂ
ಶ್ರೀ ಸೂರ್ಯ ಕವಚ ಸ್ತೋತ್ರಮ್ ಸಂಪೂರ್ಣಮ್
ಶ್ರೀ ಕೃಷ್ಣಾರ್ಪಣ ಮಸ್ತು ||


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?