ಬೆಂಗಳೂರು: ಜೀವನದಲ್ಲಿ ಎಂತಹದ್ದೇ ಕಷ್ಟ ಬಂದಾಗ ನಮಗೆ ಧೈರ್ಯ ತುಂಬುವವಳು ದುರ್ಗಾ ದೇವಿ. ಆಕೆಯ ಕುರಿತಾದ ಈ ಮಂತ್ರವನ್ನು ಜಪಿಸುವುದರಿಂದ ಕಷ್ಟ ಎದುರಿಸುವ ಧೈರ್ಯ ಬರುತ್ತದೆ.
ದುರ್ಗಾ ದೇವಿಯು ಶತ್ರು ಸಂಹಾರಿಣಿ. ಜೊತೆಗೆ ನಮ್ಮಲ್ಲಿರುವ ಆಂತರಿಕ ಭಯವನ್ನು ಹೋಗಲಾಡಿಸುವವಳು. ಆಕೆಯನ್ನು ಕುರಿತು ಪ್ರಾರ್ಥನೆ ಮಾಡುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸಮರ್ಥರಾಗುತ್ತೇವೆ. ದುರ್ಗಾ ದೇವಿ ವಿಶೇಷವಾಗಿ ನಮ್ಮಲ್ಲಿರುವ ಭಯ ಹೋಗಲಾಡಿಸುವ ಶಕ್ತಿ ಹೊಂದಿರುತ್ತಾಳೆ. ನಮ್ಮೊಳಗಿನ ಭಯ ಹೋಗಿ ಕಷ್ಟಗಳನ್ನು ನಿಭಾಯಿಸಲು ಧೈರ್ಯ ಬರಬೇಕೆಂದರೆ ಈ ಮಂತ್ರವನ್ನು ಜಪಿಸಬೇಕು.
ಯಾ ದೇವಿ ಸರ್ವ ಭೂತೇಷು, ಶಾಂತಿ ರೂಪೇಣ ಸಂಸ್ಥಿತ
ಯಾ ದೇವಿ ಸರ್ವ ಭೂತೇಷು, ಶಕ್ತಿ ರೂಪೇಣ ಸಂಸ್ಥಿತ
ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತ
ಯಾ ದೇವಿ ಸರ್ವ ಭೂತೇಷು, ಬುದ್ಧಿ ರೂಪೇಣ ಸಂಸ್ಥಿತ
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ
ಈ ಮಂತ್ರವನ್ನು ಹೇಳುವ ಮೂಲಕ ದೇವಿ ನಮ್ಮೊಳಗೆ ಅಮ್ಮನಾಗಿ, ಬುದ್ಧಿಯಾಗಿ, ಶಕ್ತಿಯಾಗಿ ನೆಲೆಸು ಎಂದು ಕೇಳಿಕೊಳ್ಳುತ್ತೇವೆ. ಜೀವನದಲ್ಲಿ ಎಂತಹದ್ದೇ ಕಷ್ಟ ಬಂದರೂ ನಿಭಾಯಿಸುವ ಶಕ್ತಿ ಕೊಡು ಎಂದು ದೇವಿಯಲ್ಲಿ ಪ್ರಾರ್ಥಿಸಲು ಈ ಮಂತ್ರವನ್ನು ಜಪಿಸಿ.