ನಿಂಬೆ ಹಣ್ಣಿನ ದೀಪವನ್ನು ಈ ವಾರ ಈ ಸಮಯದಲ್ಲಿ ಬೆಳಗಿದರೆ ಅದರ ಪ್ರತಿಫಲ ಸಿಗುತ್ತದೆಯಂತೆ

ಭಾನುವಾರ, 20 ಅಕ್ಟೋಬರ್ 2019 (06:47 IST)
ಬೆಂಗಳೂರು : ಕುಟುಂಬದವರಿಗೆ ಒಳ್ಳೆಯದಾಗಲಿ ಎಂದು ಕೆಲವು ಮಹಿಳೆಯರು ದೇವಿಗೆ ನಿಂಬೆಹಣ್ಣಿನ ದೀಪ ಬೆಳಗುತ್ತಾರೆ. ಆದರೆ ಇದನ್ನು ಯಾವಾಗ ಬೇಕು ಆವಾಗ ದೇವಿಗೆ ನಿಂಬೆ ಹಣ್ಣಿನ ದೀಪ ಹಚ್ಚುವ ಹಾಗೇ ಇಲ್ಲ. ಅದಕ್ಕೆ ಒಂದು ನಿರ್ದಿಷ್ಟವಾದ ಸಮಯವಿದೆ . ಆ ಸಮಯದಲ್ಲಿ ಬೆಳಗಿದರೆ ಮಾತ್ರ ಅದರ ಪ್ರತಿಫಲ ಸಿಗುತ್ತದೆ.ಪಾರ್ವತಿ ದೇವಿಗೆ ನಿಂಬೆ ಹಣ್ಣಿ ದೀಪ ಬೆಳಗುವಾಗ ಮಂಗಳವಾರ ಮತ್ತು ಶುಕ್ರವಾರ ಬೆಳಗಿದರೆ ಉತ್ತಮ. ಅದರಲ್ಲೂ ರಾಹು ಕಾಲದ ಸಮಯದಲ್ಲಿ ಮಾತ್ರ ಈ ದೀಪವನ್ನು ಬೆಳಗಬೇಕು.

 

ಹಾಗೇ ಮಂಗಳವಾರ ಬೆಳಗುವ ನಿಂಬೆ ಹಣ್ಣಿನ ದೀಪಕ್ಕಿಂತ ಶುಕ್ರವಾರ ಬೆಳಗುವ ನಿಂಬೆ ಹಣ್ಣಿನ ದೀಪ ಹೆಚ್ಚು ಶ್ರೇಷ್ಠ. ಯಾಕೆಂದರೆ ಮಂಗಳವಾರ ಬೆಳಗುವ ದೀಪಕ್ಕೆ ರಜೋಗುಣದ ತತ್ವವಿರುತ್ತದೆ. ಶುಕ್ರವಾರ ಬೆಳಗುವ ದೀಪಕ್ಕೆ ಸತ್ವಗುಣವಿರುತ್ತದೆ. ಆದ್ದರಿಂದ ಶುಕ್ರವಾರ ಬೆಳಗುವ ದೀಪವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಪ್ಪಿತಪ್ಪಿಯೂ ಈ ದೇವಿಗೆ ನಿಂಬೆ ಹಣ್ಣಿನ ದೀಪ ಹಚ್ಚಬೇಡಿ